For Quick Alerts
  ALLOW NOTIFICATIONS  
  For Daily Alerts

  ಲವ್ಲಿ ಬೆಡಗಿ ಜೆನಿಲಿಯಾ ಮದುವೆ ಮುಹೂರ್ತ ಫಿಕ್ಸ್

  By Rajendra
  |

  ಕಡೆಗೂ ಲವ್ಲಿ ಬೆಡಗಿ ಜೆನಿಲಿಯಾ ಡಿಸೋಜಾ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ತನ್ನ ಬಹುಕಾಲದ ಮಿತ್ರ ರಿತೇಶ್ ದೇಶ್‌ಮುಖ್ ಅವರೊಂದಿಗೆ ಫೆಬ್ರವರಿ 3, 2012ಕ್ಕೆ ಮಂಗಳವಾದ್ಯಗಳು ಮೊಳಗಲಿವೆ. ಮುಂಬೈನ ಪಂಚತಾರಾ ಹೋಟೆಲ್ ಲ್ಯಾಂಡ್ಸ್ ಎಂಡ್‌ನಲ್ಲಿ ಮದುವೆ ಸಂಭ್ರಮ ನಡೆಯಲಿದೆ.

  ಫೆಬ್ರವರಿ 3 ಮತ್ತು 4ರಂದು ಮುಂಬೈ ಸಂತಾ ಕ್ರೂಸ್‌ನ ಗ್ರ್ಯಾಂಡ್ ಹಯಾತ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಬಾಲಿವುಡ್‌ನ ಬಹಳಷ್ಟು ತಾರೆಗಳು ಜೆನಿಲಿಯಾ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಇದಕ್ಕೂ ಮುನ್ನ ರಿತೇಶ್ ಅವರ ಹೌಸ್‌ಫುಲ್ 2 ಚಿತ್ರದ ನಿರ್ಮಾಪಕ ಜ.24ರಂದು ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಿದ್ದಾರೆ.

  ಈ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್ ಅವರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಈಗಾಗಲೆ ರಿತೇಶ್ ಕಾರ್ಯಕ್ರಮಕ್ಕೆದಯವಿಟ್ಟು ಬನ್ನಿ ಎಂದು ತನ್ನ ಎಲ್ಲ ಗೆಳೆಯರಿಗೆ ಎಸ್‌ಎಂಎಸ್ ಕಳುಹಿಸಿದ್ದಾರಂತೆ. ಅಂದಹಾಗೆ ಜೆನಿಲಿಯಾ ಕನ್ನಡ ಒಂದೇ ಒಂದು ಚಿತ್ರ 'ಸತ್ಯ ಇನ್ ಲವ್' ಚಿತ್ರದಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)

  English summary
  Bubbly actress Genelia D’Souza’s marriage date has been confirmed finally.She is going to marry with her long-time boyfriend Ritesh Deshmukh on February 3rd, 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X