»   » ಮುಂಬೈ ಆಸ್ಪತ್ರೆ ಸೇರಿದ್ದಾರೆ ನಟ ಹೃತಿಕ್ ರೋಶನ್

ಮುಂಬೈ ಆಸ್ಪತ್ರೆ ಸೇರಿದ್ದಾರೆ ನಟ ಹೃತಿಕ್ ರೋಶನ್

Posted By:
Subscribe to Filmibeat Kannada
Hruthik
ನಟ ಹೃತಿಕ್ ರೋಶನ್ ಆಸ್ಪತ್ರೆ ಸೇರಿದ್ದಾರೆ. ವೈದ್ಯರು ಎರಡು ವಾರಗಳ ಸಂಪೂರ್ಣ ವಿಶ್ರಾಂತಿ ಹೇಳಿದ್ದಾರೆ. ಕಾರಣ ತೀವ್ರ ಬೆನ್ನು ನೋವು. ಅಗ್ನಿಪಥ್ ಚಿತ್ರದಲ್ಲಿ ಕೆಲಸ ಮಾಡುವಾಗ ಹೃತಿಕ್ ಗೆ ಬೆನ್ನುನೋವು ಕಾಣಿಸಿಕೊಂಡಿದೆ. ಈಗ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿದ್ದಾರೆ. ಹೃತಿಕ್ ಅಭಿಮಾನಿಗಳ ಎದೆ ಬಡಿತ ಜಾಸ್ತಿಯಾಗಿದೆ.

ಜಸ್ಟ್ ಡಾನ್ಸ್ ಟಿವಿ ಶೋ ಮತ್ತು ಅಗ್ನಿಪಥ್ ಚಿತ್ರದ ಶೂಟಿಂಗ್ ನಲ್ಲಿ ಕಂಟಿನ್ಯೂ ಆಗಿ ಅವರು ಭಾಗವಹಿಸಿದ್ದರು. ಹಾಗಾಗಿ ಹೀಗಾಗಿದೆ ಎಂದಿದ್ದಾರೆ, ಅವರಪ್ಪ ರಾಕೇಶ್ ರೋಶನ್. ಕೆಲವು ದಿನಗಳ ಹಿಂದೆ ನಟಿ ವಿದ್ಯಾಬಾಲನ್ ಕೂಡ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ವಿದ್ಯಾಗೆ ಸೆಕ್ಸಿ ಸಿಲ್ಕ್ ಸ್ಮಿತಾ ಜೀವನವನ್ನಾಧರಿಸಿದ ಸಿನಿಮಾ 'ಡರ್ಟಿ ಪಿಕ್ಚರ್' ಚಿತ್ರದಲ್ಲಿ ನಟಿಸಿದ್ದರಿಂದ ಹೀಗಾಗಿರಬಹುದು.

ಆದರೆ ನಮ್ಮ ಹೃತಿಕ್ ಗೆ ಯಾಕೆ ಹೀಗಾಯ್ತು? ಕಟ್ಟುಮಸ್ತಾಗಿದ್ದರಲ್ಲ. ನಿರಂತರ ಶೂಟಿಂಗ್ ನಿಂದ ತೊಂದರೆಯಾಗಿದ್ದರೆ ಪರಾವಾಗಿಲ್ಲ, ವಿಶ್ರಾಂತಿಯಿಂದ ಸರಿ ಹೋಗುತ್ತೆ. ಇನ್ನೇನೂ ತೊಂದರೆ ಆಗದಿರಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರಂತೆ. ಹೃತಿಕ್ ಬೇಗ ಗುಣವಾಗಲೆಂದು ಬಾಲಿವುಡ್ ಗೆ ಬಾಲಿವುಡ್ ಬಯಸಿದೆ ಎಂಬುದು ಸುದ್ದಿ (ಏಜೆನ್ಸೀಸ್)

English summary
Bollywood actor hrithik roshan admitted in Mumbai breach candy hospital. He is suffering from back pain. Doctor told to take two days rest. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada