For Quick Alerts
  ALLOW NOTIFICATIONS  
  For Daily Alerts

  ಕ್ಯೂಬಾದಲ್ಲಿ ಸಲ್ಮಾನ್ ನರ್ಸ್ ಆಗಲಿರುವ ಕತ್ರಿನಾ

  |

  ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಒಂದಾನೊಂದು ಕಾಲದಲ್ಲಿ ಪ್ರೇಮಿಗಳಾಗಿದ್ದರು. ನಂತರ ಪ್ರೇಮ ಭಗ್ನವಾದರೂ ಫ್ರೆಂಡ್ಸ್ ಆಗಿ ಆಗಾಗ ಭೇಟಿ ನಡೆದೀ ಇತ್ತು. ಇಬ್ಬರೂ ಒಟ್ಟಾಗಿ ಬಾಲಿವುಡ್ ಚಿತ್ರ 'ಏಕ್ ಥಾ ಟೈಗರ್'ನಲ್ಲಿ ಅಭಿನಯಿಸುತ್ತಿದ್ದಾರೆ. ತೆರೆಯಲ್ಲಿ ರೋಮಾನ್ಸ್ ಮುಂದುವರಿಸಲು ಇಬ್ಬರೂ ಒಪ್ಪಿದ್ದಾರೆ.

  ಕಬೀರ್ ಖಾನ್ ನಿರ್ದೆಶನದ ಈ ಚಿತ್ರತಂಡ ಶೂಟಿಂಗ್ ಗಾಗಿ ಇದೀಗ ಕ್ಯೂಬಾ ದೇಶಕ್ಕೆ ಪ್ರಯಾಣ ಬೆಳೆಸಲಿದೆ. ಅಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಶೂಟಿಂಗ್ ನಲ್ಲಿ ಕಾಲಕಳೆಯಲಿದ್ದಾರೆ. ನರದೌರ್ಬಲ್ಯದಿಂದ ಬಳಲುತ್ತಿರುವ ಸಲ್ಲುಗೆ ಆ ದೇಶದ ಬೆಚ್ಚಗಿನ ಹವಾಮಾನ ಸೂಕ್ತ ಎನ್ನಲಾಗಿದೆ.

  ಸಲ್ಮಾನ್ ಅಲ್ಲಿ ಕೆಲವೊಂದು ಕಠಿಣ ಸ್ಟಂಟ್ ಮಾಡಬೇಕಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಸಲ್ಮಾನ್ ಗೆ ಕತ್ರಿನಾ ಕೈಫ್ ಆರೈಕೆ ಮಾಡಲಿದ್ದಾರಂತೆ. ಸಿನಿಮಾದಲ್ಲಿ. ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವುದಲ್ಲದೇ ಒಬ್ಬರು ಇನ್ನೊಬ್ಬರ ಅನಾರೋಗ್ಯದ ವೇಳೆಗೂ ಸಹಾಯ ಮಾಡುತ್ತಾರೆ. ಆದರೆ ಲವ್ ಇಲ್ಲ ಅಷ್ಟೇ ಅಂತ ಬಾಲಿವುಡ್ ನಗುತ್ತಿದೆ. (ಏಜೆನ್ಸೀಸ್)

  English summary
  Salman Khan and Katrina Kaif are likely to spend almost one month together in Cuba as they will be shooting for Kabir Khans Ek Tha Tiger.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X