ಸಚಿನ್ ಜೊತೆಗೂಡಿದ ಶಾರುಖ್, ವಿದ್ಯಾ ಬಾಲನ್
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಹಾಗೂ ವಿದ್ಯಾ ಬಾಲನ್ ಒಟ್ಟಾಗಿ ನಟಿಸುವ ಕನಸು ಕಂಡಿದ್ದು, ಅದನ್ನು ಹೇಳಿದ್ದು ಅದೆಷ್ಟೋ ಬಾರಿ. ಆದರೆ ಯಾವುದೇ ನಿರ್ದೇಶಕರಾಗಲೀ ಅಥವಾ ನಿರ್ಮಾಪಕರಾಗಲೀ ಅವರನ್ನು ಜೋಡಿಯಾಗಿಸಿ ಸಿನಿಮಾ ಮಾಡುವ ಸಾಹಸಕ್ಕೆ ಇನ್ನೂ ಕೈಹಾಕಿಲ್ಲ. ಆದರೂ ಅವರಿಬ್ಬರ ಕಸನು ಸದ್ಯದಲ್ಲೇ ನನಸಾಗಲಿದೆ.
ವಿಶ್ವ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್, ಕುಡಿಯುವ ನೀರು ಮತ್ತು ಸಾನಿಟರಿ ಸಂಬಂಧ ಸದ್ಯದಲ್ಲೇ ವಾಣಿಜ್ಯ ಜಾಹೀರಾತೊಂದನ್ನು ನಿರ್ಮಿಸಲಿದ್ದಾರೆ. ಅದಕ್ಕೆ ಈಗಾಗಲೇ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ರೂಪದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಶ್ಯಾಮ್ ಬೆನೆಗಲ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಹಾಗೂ ವಿದ್ಯಾ ಕೂಡ ಜೊತೆಯಾಗಲಿದ್ದಾರೆಂಬ ಸುದ್ದಿ ಬಂದಿದೆ.
ಈ ಸಂಬಂಧ ಈಗಾಗಲೇ ಇಬ್ಬರ ಜೊತೆಗೂ ಮಾತುಕತೆ ನಡೆದಿದ್ದು, ವಿದ್ಯಾ ಹಾಗೂ ಶಾರುಖ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಬ್ಬರ ಅಭಿಮಾನಿಗಳೂ ಈ ಜೋಡಿಯನ್ನು ತೆರೆಯಲ್ಲಿ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಜೊತೆಯಲ್ಲಿ ಸಚಿನ್ ತೆಂಡೂಲ್ಕರ್ ನೋಡುವ ಅವಕಾಶವೂ ಇದ್ದಾಗ ಯಾರಿಗೆ ಖುಷಿಯಾಗೊಲ್ಲ ಹೇಳೀ! (ಏಜೆನ್ಸೀಸ್)


Click it and Unblock the Notifications











