»   »  ಶಾರುಖ್ ಕಾಜೋಲ್ ಪ್ರಣಯ ಜೋಡಿ ನಂ.1

ಶಾರುಖ್ ಕಾಜೋಲ್ ಪ್ರಣಯ ಜೋಡಿ ನಂ.1

By: * ನಿಸ್ಮಿತಾ
Subscribe to Filmibeat Kannada

ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಹಾಗೂ ಮಾದಕ ಕಂಗಳ ಕೃಷ್ಣ ಸುಂದರಿ ಕಾಜೋಲ್ ಅವರ ಪರದೆ ಮೇಲಿನ ರೋಮ್ಯಾನ್ಸ್ ಗೆ ಮೆಚ್ಚಿ, ಜನರುಅತ್ಯಧಿಕ ಸಂಖ್ಯೆಯಲ್ಲಿ ಓಟುಗಳನ್ನು ಹಾಕಿದ ಪರಿಣಾಮ ಈರ್ವರನ್ನು ಬಾಲಿವುಡ್ ಕಂಡ "ಅತ್ಯಂತ ಪ್ರಣಯಭರಿತ ಜೋಡಿ" ಎಂದು ಘೋಷಿಸಲಾಗಿದೆ. ರೋಮ್ಯಾಂಟಿಕ್ ಜೋಡಿಗಳ ಬಗ್ಗೆ ಇತ್ತೀಚೆಗೆ ಎಂಡಿಆರ್ ಎ ಹಾಗೂ ಔಟ್ ಲುಕ್ ಪತ್ರಿಕೆ ಸಮೀಕ್ಷೆ ನಡೆಸಿ, ಈ ಫಲಿತಾಂಶ ನೀಡಿದೆ.

ಬಾಜಿಗರ್ ನಿಂದ ಶುರುವಾದ ಶಾರುಖ್ ಕಾಜೋಲ್ ಸಾಂಗತ್ಯ, ದಿಲ್ ವಾಲೆ ದುಲ್ಹನಿಯಾ ಲೇ ಜಾಯಂಗೆ (DDLJ), ಕುಛ್ ಕುಛ್ ಹೋತಾಯೇ ,ಕಭಿ ಖುಷಿ ಕಭಿ ಕಮ್ ಮುಂತಾದ ಚಿತ್ರಗಳಲ್ಲಿ ಆದರ್ಶ ಜೋಡಿಯಾಗಿ ಮೆರೆಯಿತು. 'ದಿಲ್ ವಾಲೆ ..'ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿದ ಚಿತ್ರವಾಗಿದೆ. ಮುಂಬೈನ ಚಿತ್ರಮಂದಿರವೊಂದರಲ್ಲಿ ಸುಮಾರು 14 ವರ್ಷಗಳಿಂದ ಸತತ ಪ್ರದರ್ಶನ ಕಾಣುತ್ತಿದೆ ಎಂದರೆ ನೀವೇ ಊಹಿಸಿ. ಅತ್ಯಂತ ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಹಾಗಾಗಿ ಅಗ್ರಸ್ಥಾನವನ್ನು ಡಿಡಿಎಲ್ ಜೆ ಚಿತ್ರ ಅಲಂಕರಿಸಿದೆ. ಶಾರುಖ್ ಕಾಜೋಲ್ ಜೋಡಿಯ ಕುಛ್ ಕುಛ್ ಹೋತಾ ಹೈ ಎರಡನೇ ಸ್ಥಾನ ಪಡೆದರೆ, ಸಲ್ಮಾನ್ ಖಾನ್ ಭಾಗ್ಯಶ್ರೀ ಅಭಿನಯದ ಮೈನೆ ಪ್ಯಾರ್ ಕಿಯಾ ಚಿತ್ರ ಮೂರನೇ ಸ್ಥಾನದಲ್ಲಿದೆ.

ಇದುವರೆವಿಗೂ ಬೆಳ್ಳಿ ಪರದೆಯಲ್ಲಿ ಕಂಡ ಪ್ರಣಯಭರಿತ ಜೋಡಿಗಳಿವು:
1.ಶಾರುಖ್-ಕಾಜೋಲ್
2.ಅಮಿತಾಬ್-ರೇಖಾ
3.ಸಲ್ಮಾನ್-ಮಾಧುರಿ
4.ಅಕ್ಷಯ್-ಕತ್ರೀನಾ
5.ಶಹೀದ್-ಕರೀನಾ
6.ಹೃತಿಕ್-ಐಶ್ವರ್ಯ
7.ರಿಷಿಕಪೂರ್-ಡಿಂಪಲ್ ಕಪಾಡಿಯಾ
8.ರಾಜ್ ಕಪೂರ್-ನರ್ಗೀಸ್
9.ರಾಜೇಶ್ ಖನ್ನಾ-ಮುಮ್ತಾಜ್
10 ಧರ್ಮೇಂದ್ರ-ಹೇಮಮಾಲಿನಿ

ಈ ಪಟ್ಟಿಗೆ ಪೂರಕ ಜೋಡಿಯಾಗಿ ಅಜಯ್ ದೇವಗನ್ ಕಾಜೋಲ್ ಜೋಡಿ ಸೇರ್ಪಡೆಯಾಗಿದೆ. ಆದರೆ, ಚಾಕಲೋಟ್ ಹೀರೋ ಬುದ್ಧಿವಂತನಟ ಅಮೀರ್ ಖಾನ್ ಹಾಗೂ ಜೂಹಿ ಚಾವ್ಲಾ ಜೋಡಿ ಪಟ್ಟಿಯಲ್ಲಿ ಕಾಣೆಯಾಗಿರುವುದು ಅಚ್ಚರಿಯ ವಿಷಯ ಎಂದು ಬಾಲಿವುಡ್ ಪಂಡಿತ ಅಭಿಪ್ರಾಯ.

ಕನ್ನಡ ಚಿತ್ರರಂಗದಲ್ಲೂ ರಾಜ್ ಕುಮಾರ್-ಭಾರತಿ, ಶ್ರೀನಾಥ್-ಮಂಜುಳಾ, ವಿಷ್ಣುವರ್ಧನ್-ಮಾಧವಿ, ಅನಂತ್ ನಾಗ್-ಲಕ್ಷ್ಮಿ, ಅಂಬರೀಶ್-ಅಂಬಿಕಾ, ಶಂಕರ್ ನಾಗ್-ಭವ್ಯ, ಅಪೂರ್ವ ಜೋಡಿಗಳು ಬೆಳ್ಳಿ ಪರದೆಯಲ್ಲಿ ಮಿಂಚಿದ್ದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚಿನ ದಿನಗಳ ನಾಯಕ ನಾಯಕಿಯರಲ್ಲಿ ಶಿವರಾಜ್ ಕುಮಾರ್-ಸುಧಾರಾಣಿ, ಸುನೀಲ್-ಮಾಲಾಶ್ರೀ, ಸುದೀಪ್-ರಮ್ಯಾ, ದರ್ಶನ್-ರಕ್ಷಿತಾ, ಪ್ರೇಮ್ ಕುಮಾರ್-ರಮ್ಯಾ, ವಿಜಯ್-ಶುಭಾ ಪೂಂಜಾ, ಗಣೇಶ್-ಪೂಜಾಗಾಂಧಿ ಪಟ್ಟಿಯನ್ನು ಬೆಳಸಬಹುದು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada