Just In
Don't Miss!
- News
ನೇಪಾಳ ಕಮ್ಯೂನಿಸ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಉಚ್ಚಾಟನೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಯ್ಯೋ ನಾನು ಇನ್ನೂ ಪ್ರೆಗ್ನೆಂಟ್ ಆಗಿಲ್ಲ: ಶಿಲ್ಪಾ ಶೆಟ್ಟಿ
ಕೆಲದಿನಗಳ ಹಿಂದೆ ಮಂಗಳೂರು ಕುಡಿ ಶಿಲ್ಪಾ ಶೆಟ್ಟಿ ಅಮ್ಮ ಆಗಲಿದ್ದಾರೆ ಎಂಬ ಸುದ್ದಿ ಎಲ್ಲ ಮಾಧ್ಯಮಗಳು ಸೇರಿದಂತೆ ದಟ್ಸ್‌ಕನ್ನಡದಲ್ಲೂ ಪ್ರಕಟವಾಗಿತ್ತು. ಆದರೆ ತಾನು ಇನ್ನೂ ಪ್ರೆಗ್ನೆಂಟ್ ಆಗಿಲ್ಲ ಎಂಬುದನ್ನು ಸ್ವತಃ ಶಿಲ್ಪಾ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಶಿಲ್ಪಾ ಪ್ರೆಗ್ನೆಂಟ್ ಎಂಬ ಸುದ್ದಿ ಬಂದದ್ದೇ ತಡ, ಆಕೆಗೆ ಎಸ್‌ಎಂಎಸ್‌ಗಳ ಮಹಾಪೂರವೆ ಹರಿದುಬಂದಿದೆಯಂತೆ.
ಅಯ್ಯೋ ನಾನು ಪ್ರೆಗ್ನೆಂಟ್ ಅಲ್ಲ ಎಂದು ಬಂದ ಎಸ್‌ಎಂಎಸ್‌ಗಳಿಗೆ ಉತ್ತರಿಸಬೇಕಾದರೆ ಆಕೆ ಕೈ ಬಿದ್ದು ಹೋಯಿತಂತೆ. ಕಡೆಗೆ ಈ ಕಿರಿಕಿರಿಗೆ ಬೇಸತ್ತು ತನ್ನ ಟ್ವಿಟ್ಟರ್ ಅಕೌಂಟ್‌ನಲ್ಲೂ ತಾನು ಪ್ರಗ್ನೆಂಟ್ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. "To all my followers 'If, how and when I wish to make any personal announcement, is entirely MY (not the press') prerogative! As of now there's none to make" ಎಂದು ಟ್ವೀಟ್ ಮಾಡಿದ್ದಾರೆ.
ಶಿಲ್ಪಾ ಈ ಹಿಂದೆಯೇ ಅಮ್ಮನಾಗುವ ಬಯಕೆ ವ್ಯಕ್ತಪಡಿಸಿದ್ದರು. ನನಗೆ ಮಕ್ಕಳು, ನನ್ನ ಕುಟುಂಬ ಎಂದರೆ ಎಲ್ಲಿಲ್ಲದ ಪ್ರಾಣ. ಅದಕ್ಕಾಗಿ ನರ್ಸರಿಯನ್ನು ತೆರೆದಿದ್ದೇನೆ. ಮಗುವಿನ ಬೆಡ್ ರೂಂ ಸಿದ್ಧವಾಗಿದೆ. ನನಗೆ ಇಬ್ಬರು ಮಕ್ಕಳು ಬೇಕೇ ಬೇಕು. ಕುಂದ್ರಾ ಓಕೆ ಅನ್ನಬೇಕು ಅಷ್ಟೆ ಎಂದು 2009ರಲ್ಲಿ ಸಂದರ್ಶನವೊಂದರಲ್ಲಿ ಶಿಲ್ಪಾ ತಮ್ಮ ಮನದಾಸೆಯನ್ನು ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು. (ಏಜೆನ್ಸೀಸ್)