»   » ಜಾನ್ ಅಬ್ರಹಾಂ ಮೀಸೆ ಪುರಾಣ!

ಜಾನ್ ಅಬ್ರಹಾಂ ಮೀಸೆ ಪುರಾಣ!

Posted By:
Subscribe to Filmibeat Kannada

ಯಪ್ಪೋ ನಾ ಒಲ್ಲೆ!.. ಚೆಡ್ಡಿ ಬೇಕಾರೆ ಇನ್ನೂ ಒಂದಿಷ್ಟು ಕೆಳಗೆ ಎಳಿತ್ತೀನಿ(ದೋಸ್ತಾನ ಚಿತ್ರ ನೆನಪಿಸಿಕೊಳ್ಳಿ) ಆದ್ರೆ ಗಿರಿಜಾ ಮೀಸೆ ಮಾತ್ರ ಇಟ್ಟುಕೊಳ್ಳಲ್ಲ ಎಂದು ಹಠ ಹಿಡಿದು ಕೂತಿದ್ದಾನೆ. ಬಿಪಾಶ ಪ್ರಿಯಕರ ಜಾನ್ ಅಬ್ರಹಾಂ. ಉತ್ತಮ ಪಾತ್ರ ದೊರೆತರೆ ಸಾಕು ಏನು ಮಾಡೋಕೆ ಬೇಕಾದ್ರೂ ರೆಡಿ ಎನ್ನುವ ಕಾಲದಲ್ಲಿ ಜಾನ್ ಈ ರೀತಿ ನಕಾರ ಯಾಕೋ ಗೊತ್ತಿಲ್ಲ.

ಪ್ಯಾರಲಲ್ ಸಿನಿಮಾ ಹುಚ್ಚು ಹಿಡಿದು ಒಮ್ಮೆ ದರ್ಶನ್ ಕೂಡ ಕಣ್ಣು ಗುಡ್ಡೆ ಎಲ್ಲಾ ಮೇಲಕ್ಕೆ ಮಾಡಿ 'ನಮ್ಮ ಪ್ರೀತಿಯ ರಾಮು' ಎಂಬ ಚಿತ್ರ ಮಾಡಿದ್ದು ಇದೆ. ಆಮೇಲೆ ಚಿತ್ರವನ್ನು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಮಕಾಡೆ ಮಲಗಿಸಿದ ಮೇಲೆ, ವ್ಯವಸ್ಥೆಯ ಸಿಟ್ಟಿಗೆದ್ದ ದರ್ಶನ್ ಭೂಪತಿಗಳು ನಾನು ಸಿನಿಮಾ ಓಡುತ್ತೆ, ನಿರ್ಮಾಪಕರಿಗೆ ಲಾಭ ಬರುತ್ತೆ ಅನ್ನುವುದಾದರೆ, ಕನಿಷ್ಠ ಚಡ್ಡಿ ಹಾಕಿಕೊಂಡು ನಟಿಸಲು ಸಿದ್ಧ ಎಂದು ಘೋಷಿಸಿದ್ದರು. ಆಮೇಲೆ ಬಿಡಿ ಬರೀ ಕಮರ್ಷಿಯಲ್ ಚಿತ್ರಗಳು, 'ಯಥಾ ಅಭಿಮಾನಿ ದೇವತಾ ತಥಾ ಫಿಲ್ಮಂ ಸ್ಟಾರ್ ಕುಣಿತ'.

ಕನ್ನಡ ಚಿತ್ರರಂಗದಲ್ಲೇ ಈ ರೀತಿ ಆದ ಮೇಲೆ, ಇನ್ನು ಬಾಲಿವುಡ್ ನಂತಹ ಬಾಲಿವುಡ್ ನಲ್ಲಿ ಇಮೇಜ್ ಬಗ್ಗೆ ಚಿಂತಿಸದೇ ಇರಲು ಸಾಧ್ಯವೇ. ಅದಕ್ಕೆ ಜಾನ್, ನನಗೆ ಮೀಸೆ ಬೇಡವೇ ಬೇಡ ಅನ್ನುವುದರಲ್ಲಿ ಅರ್ಥವಿದೆ. ಆದರೂ, 'ಕಾಕ್ಕಾ ಕಾಕ್ಕಾ' ಚಿತ್ರದಂತಹ ರಿಮೇಕ್ ನಲ್ಲಿ ಪೊಲೀಸ್ ಕಾಪ್ ಪಾತ್ರಕ್ಕೆ ಮೀಸೆ ಬೇಡ ಎಂದರೆ ಹೇಗೆ? ಪುರುಷ ಸಿಂಹನ ಮುಖದಲ್ಲಿ ಮೀಸೆಗೆ ಬರ ಬಂದರೆ? ಛೇ ಹೇಗಪ್ಪಾ ಹೀರೋಗೆ ಹೇಳೋದು ಅಂಥಾ ನಿರ್ದೇಶಕ ವಿಪುಲ್ ಅಮೃತ್ ಲಾಲ್ ಶಾ ಅಂತೂ ತಲೆ ಕೆಡಿಸಿಕೊಂಡಿದ್ದಾರೆ. ಹಿಂದಿ 'ಗೋಲ್ ಮಾಲ್ 'ಚಿತ್ರವನ್ನಾದರೂ ಒಮ್ಮೆ ತೋರಿಸಿದರೆ ಹೇಗೆ ಎನಿಸಿದೆಯಂತೆ ನಿರ್ದೇಶಕರಿಗೆ.

ಸಲ್ಮಾನ್ ಕೂಡ ಇಮೇಜ್ ಗೆ ಕೇರ್ ಮಾಡದೆ ದಬಂಗ್ ಚಿತ್ರದಲ್ಲಿ ಮೀಸೆ ಬಿಟ್ಟಿದ್ದಾರೆ. ಬಾಲಿವುಡ್ ನಟರು ಮೀಸೆ ಬಿಡುವುದೇ ಕಮ್ಮಿ ಮೂಲ ತಮಿಳು, ತೆಲುಗು ಚಿತ್ರಗಳಲ್ಲಿ, ಸೂರ್ಯಹಾಗೂ ವೆಂಕಟೇಶ್ ಭರ್ಜರಿ ಮೀಸೆ ಬಿಟ್ಟು ಖಡಕ್ ಆಫೀಸರ್ ಗಳಂತೆ ಭರ್ಜರಿ ಯಶಸ್ಸು ಕಂಡಿದ್ದರು. 'ಮೂಚ್ ಮುಂಡ' ಜಾನ್ ಅಬ್ರಹಾಂ ಪೊಲೀಸ್ ಪಾತ್ರ ಹೇಗೆ ಬರುವುದೋ ಕಾದು ನೋಡೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada