»   » ಕತ್ರಿನಾ ಕೈಫ್ ಕಾರು ಜಖಂ ಮಾಡಿದ ಅಭಿಮಾನಿಗಳು

ಕತ್ರಿನಾ ಕೈಫ್ ಕಾರು ಜಖಂ ಮಾಡಿದ ಅಭಿಮಾನಿಗಳು

Posted By:
Subscribe to Filmibeat Kannada

ಸದ್ಯಕ್ಕೆ ಬಾಲಿವುಡ್‌ನಲ್ಲಿ ಎಲ್ಲೆಲ್ಲೂ 'ತೀಸ್ ಮಾರ್ ಖಾನ್' ಚಿತ್ರದ್ದೇ ಚರ್ಚೆ. ಈ ಚಿತ್ರ ಯಶಸ್ವಿಯಾಗಲಿ ಎಂದು ಇತ್ತೀಚೆಗೆ ಕತ್ರಿನಾ ಕೈಫ್ ಅಲ್ಲಾಗೆ ಮೊರೆ ಹೋಗಲು ಅಜ್ಮೀರ್ ಷರೀಫ್‍ ದರ್ಗಾಗೆ ಭೇಟಿ ನೀಡಿದ್ದರು. ಆದರೆ ಅಭಿಮಾನಿಗಳ ನೂಕು ನುಗ್ಗಲಿನ ಕಾರಣ ಆಕೆ ಕಾರಿನಿಂದ ಇಳಿಯಲು ಸಾಧ್ಯವಾಗಲಿಲ್ಲವಂತೆ.

ಆಕೆ ದರ್ಗಾಗೆ ಬರುತ್ತಾರೆ ಎಂದು ಗೊತ್ತಾದದ್ದೇ ತಡ ಸಾವಿರಾರು ಅಭಿಮಾನಿಗಳು ದರ್ಗಾದ ಬಳಿ ಜಮಾಯಿಸಿದರು. ಕತ್ರಿನಾರನ್ನು ನೋಡುವ ತರಾತುರಿಯಲ್ಲಿ ಕತ್ರಿನಾ ಕಾರು ಜಖಂ ಆಗಿತ್ತು. ಈ ಘಟನೆಯಿಂದ ಕತ್ರಿನಾ ಮನಸಿಗೆ ಕೊಂಚ ನೋವಾಗಿದೆಯಂತೆ.

ಆಕೆ ದರ್ಗಾಗೆ ಬರುತ್ತಿದ್ದಂತೆ ಕಾರನ್ನು ಅಭಿಮಾನಿಗಳು ಸುತ್ತುವರಿದಿದ್ದಾರೆ. ಕತ್ರಿನಾರನ್ನು ನೋಡಲು ಮುಗಿಬಿದ್ದ ಕಾರಣ ಕಾರಿನ ಬಾಗಿಲನ್ನೂ ತೆಗೆಯಲು ಸಾಧ್ಯವಾಗಲಿಲ್ಲವಂತೆ. ಕಾರಿನಿಂದಲೇ ಅಲ್ಲಾನನ್ನು ಪ್ರಾರ್ಥಿಸಿದ್ದಾಗಿ ಸುದ್ದಿ. ತಮ್ಮ ಪ್ರತಿ ಚಿತ್ರ ಬಿಡುಗಡೆಗೆ ಮುನ್ನ ಕತ್ರಿನಾ ದರ್ಗಾಗೆ ಭೇಟಿ ನೀಡುವುದು ವಾಡಿಕೆ. ಆದರೆ ಈ ಬಾರಿ ಆಕೆಯ ಆಸೆ ನೆರವೇರಲಿಲ್ಲ.

ದರ್ಗಾದ ಬಳಿಯ ಸ್ಥಳೀಯರೊಬ್ಬರು ಪ್ರಕಾರ, "ಪ್ರತಿ ವರ್ಷ ಇಲ್ಲಿನ ದರ್ಗಾಗೆ ಬಾಲಿವುಡ್‌ನ ಹಲವಾರು ತಾರೆಗಳು ಬರುತ್ತಾರೆ. ತಮ್ಮ ಚಿತ್ರ ಯಶಸ್ವಿಯಾಗಲಿ ಎಂದು ಅಲ್ಲಾನಲ್ಲಿ ಮೊರೆಹೋಗುತ್ತಾರೆ. ಆದರೆ ಕತ್ರಿನಾರನ್ನು ನೋಡಲು ಬಂದಷ್ಟು ಅಭಿಮಾನಿಗಳನ್ನು ನಾನು ಇದುವರೆಗೂ ನೋಡಿಲ್ಲ" ಎಂದಿದ್ದಾರೆ. [ಕತ್ರಿನಾ ಕೈಫ್]

English summary
Bollywood actress Katrina Kaif"s car smashed by her fans yesterday at Ajmir. The actress went to the dargah to pray for the success of her upcoming bollywood film Tees Maar Khan. When she visited Ajmer Shariff, thousands of her fans were waiting there to get a glimpse of their favorite actress.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada