For Quick Alerts
  ALLOW NOTIFICATIONS  
  For Daily Alerts

  ಮತ್ತೆ ಇಮ್ರಾನ್ ಹಶ್ಮಿ, ವಿದ್ಯಾ ಬಾಲನ್ ಐತಲಕಡಿ

  |

  ವಿದ್ಯಾ ಬಾಲನ್ ಮತ್ತೆ ಇಮ್ರಾನ್ ಹಶ್ಮಿಗೆ ಜೊತೆಯಾಗಲಿದ್ದಾರೆ. ಕಳೆದ ವರ್ಷ ಬಿಡುಗಡೆಯಾಗಿದ್ದ 'ದಿ ಡರ್ಟಿ ಪಿಕ್ಚರ್' ಸಾಕಷ್ಟು ಯಶಸ್ವಿಯಾಗಿತ್ತು. ಈಗ ಮತ್ತೆ ಇದೇ ಜೋಡಿಯನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಘಾನ್ ಚಕ್ಕಾರ್ ಹೆಸರಿನ ಚಿತ್ರವನ್ನು ನಿರ್ದೇಶಕ ರಾಜ್ ಕುಮಾರ್ ಗುಪ್ತಾ ನಿರ್ದೆಶಿಸಲಿದ್ದು, ಇದರಲ್ಲಿ ಈ ಜೋಡಿ ಮತ್ತೆ ಒಂದಾಗಲಿದೆ.

  ರಾಜ್ ಕುಮಾರ್ ಗುಪ್ತಾರ 'ನೋ ಒನ್ ಕಿಲ್ಡ್ ಜೆಸ್ಸಿಕಾ' ಎಂಬ ಚಿತ್ರದಲ್ಲಿ ಈಗಾಗಲೇ ವಿದ್ಯಾ ಬಾಲನ್ ನಟಿಸಿದ್ದಾರೆ. ಈ ಘಾನ್ ಚಕ್ಕಾರ್ ಚಿತ್ರ ಹಾಸ್ಯ ಮತ್ತು ಥ್ರಿಲ್ಲರ್ ಗಳ ಸಂಗಮವಾಗಿದ್ದು ಮುಖ್ಯ ಭೂಮಿಕೆಯಲ್ಲಿ ಇಮ್ರಾನ್ ಹಶ್ಮಿ ನಟಿಸಲಿದ್ದಾರೆ. ಈ ಚಿತ್ರ ಬರುವ ಆಗಸ್ಟ್ ನಲ್ಲಿ ಸೆಟ್ಟೇರಲಿದೆ. UTV ಈ ಚಿತ್ರವನ್ನು ನಿರ್ಮಿಸಲಿದ್ದು ಅಮಿತ್ ತ್ರಿವೇದಿ ಸಂಗೀತ ನೀಡಲಿದ್ದಾರೆ. ಅಮಿತಾಬ್ ಭಟ್ಟಾಚಾರ್ಯ ಸಾಹಿತ್ಯ ನೀಡಲಿದ್ದಾರೆ.

  UTV ಮೋಶನ್ ಪಿಕ್ಚರ್ ನ CEO ಸಿದ್ಧಾರ್ಥ್ ರಾಯ್ ಕಪೂರ್ "ರಾಜ್ ಕುಮಾರ್ ಗುಪ್ತಾ ಮತ್ತು ಪರ್ವೆಜ್ ಶೇಕ್ ಇಬ್ಬರೂ ಕಾಮಿಕ್- ಥ್ರಿಲ್ಲರ್ ಚಿತ್ರ ಮಾಡಲು ಪ್ಲಾನ್ ಮಾಡಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ಅನಿರೀಕ್ಷಿತ ಟ್ವಿಸ್ಟ್ ಹಾಗೂ ತಿರುವುಗಳಿದ್ದು, ಇವು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿವೆ" ಎಂದಿದ್ದಾರೆ. (ಏಜೆನ್ಸೀಸ್)

  English summary
  Actress Vidya Balan is once again teaming up with Emraan Hashmi after the huge success of the movie The Dirty Picture. Titled Ghanchakkar, the movie is being directed by Rajkumar Gupta.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X