»   » ಬಾಲಿವುಡ್ ನಟನಟಿಯರ ಕೋಳಿ ಜಗಳಗಳು

ಬಾಲಿವುಡ್ ನಟನಟಿಯರ ಕೋಳಿ ಜಗಳಗಳು

Subscribe to Filmibeat Kannada

ಹಿಂದಿ ಚಿತ್ರರಂಗದಲ್ಲಿ ಯಾವುದೂ ಶಾಶ್ವತವಲ್ಲ. ಹಣ, ಯಶಸ್ಸು, ಹೆಸರು. ಇಂದು ಬರುತ್ತದೆ ನಾಳೆ ಹೋಗುತ್ತದೆ. ಹಾಗೆಯೇ ಜಗಳಗಳು ಕೂಡ. ಬೆಳಿಗ್ಗೆ ಕಾಲರಿಗೆ ಕೈಹಾಕುವವರು ಸಾಯಂಕಾಲ ಗುಂಡುಹಾಕುವಾಗ ಹೆಗಲಿಗೆ ಕೈಹಾಕಿರುತ್ತಾರೆ.

ರಾಖಿ ವರ್ಸಸ್ ಕಾಶ್ಮೀರಾ : ಹಿಂದಿ ಚಿತ್ರರಂಗದ ಹಾಟೆಸ್ಟ್ ನಟಿ ರಾಖಿ ಸಾವಂತ್ ಒಂದು 'ತೆರೆದ' ಪುಸ್ತಕದಂತೆ. ಮನಸ್ಸಿನಲ್ಲಿ ಯಾವುದನ್ನೂ ಇಟ್ಟುಕೊಳ್ಳುವುದಿಲ್ಲ. ಇದ್ದದ್ದನ್ನು ಇದ್ದಂತೆಯೇ ಹೇಳುವ ಆಕೆಯ ಎದೆಗೆ ಎದ್ದು ಬಂದು ಎದೆಗೆ ಒದೆಯುವವರೇ ಜಾಸ್ತಿ. ಪಾಪ ಆಕೆ ಬೆಳೆದು ಬಂದ ರೀತಿಯೇ ಹಾಗೆ, ಆಕೆಯನ್ನು ನಡೆಸಿಕೊಳ್ಳುತ್ತಿರುವುದೂ ಹಾಗೆಯೇ.

ಬಿಗ್ ಬಾಸ್ ಟಿವಿ ಕಾರ್ಯಕ್ರಮದಲ್ಲಿ ತನಗಾದ ಅವಮಾನವನ್ನು ತಡೆಯಲಾರದೆ ಕಣ್ಣೀರ ಕೋಡಿ ಹರಿಸಿದ್ದ ರಾಖಿ ಈ ಬಾರಿ ನಾಚ್ ಬಲಿಯೇ 3 ಕಾರ್ಯಕ್ರಮದಲ್ಲಿ ಕಾಶ್ಮೀರಾ ಶಾ ಮೇಲೆ ಗರಮ್ ಆಗಿದ್ದಾಳೆ. ತೆರೆಯ ಮೇಲೆ ತೆರೆದೆದೆಯ ಸುಂದರಿಯರಿಬ್ಬರೂ "ಹ್ಹೆ ಹ್ಹೆ ನಾವಿಬ್ಬರೂ ಕ್ಲೋಸ್ ಫ್ರೆಂಡ್ಸ್" ಅಂತ ಪೋಸು ನೀಡಿ ಪರದೆಯ ಹಿಂದೆ ಹೋಗುತ್ತಿದ್ದಂತೆಯೇ ಕಾಲರ್ ಹಿಡಿಯುವ ಬದಲು ಜುಟ್ಟು ಹಿಡಿದು ಜಗಳಾಡಿದ್ದಾರೆ.

ತಮಾಷೆಯೆಂದರೆ ಈ ಜಗಳ ನಡೆದಿದ್ದು ಅವರಿಬ್ಬರ ಬಾಯ್‌ಫ್ರೆಂಡ್ ಎದುರಿಗೇ! ಆಗ ಅವರಿಬ್ಬರೂ ಏನು ಮಾಡುತ್ತಿದ್ದರು ಎಂಬುದು ಬಹಿರಂಗವಾಗಿಲ್ಲ. ರಾಖಿ ಮಾತ್ರ ತುಂಬಾ ಮನಸ್ಸಿಗೆ ಹಚ್ಚಿಕೊಂಡಿದ್ದಳೆಂದು ತಿಳಿದುಬಂದಿದೆ.

ಕುಂದರ್‌ನ ಕಡೆಗಣಿಸಿದ ಕಿಂಗ್ ಖಾನ್ : ಬಾಲಿವುಡ್ ಜಗಳಗಳೆಂದೂ ಬೂದಿ ಮುಚ್ಚಿದ ಕೆಂಡದಂತೆಯೇ. ಅದು ಯಾವಾಗ ಹೊಗೆಯುಗುಳಲು ಶುರು ಮಾಡುವುದೋ ಹೇಳಲು ಸಾಧ್ಯವಿಲ್ಲ.

ಬಾಲಿವುಡ್‌ನ ಬಾದಶಾ ಶಾಹ್‌ರುಖ್ ಖಾನ್‌ ತನ್ನ ಖಾಸಾ ಗೆಳತಿ ಫರಾ ಖಾನ್‌ನ ಗಂಡ ಶಿರೀಶ್ ಕುಂದರ್ ಮೇಲೆ ಮೌನದ ಕತ್ತಿ ಝಳಪಿಸಿದ್ದಾರೆ. ಓಂ ಶಾಂತಿ ಓಂ ಚಿತ್ರದ ಕ್ಯಾಸೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತಿನಿಂದ ಚುಚ್ಚುವುದಕ್ಕಿಂತ ಮೌನದಿಂದಲೇ ತಿವಿದು ತನ್ನ ಮನದಾಳದ ಕಹಿಯನ್ನು ಹೊರಗೆಡಹಿದ್ದಾರೆ ಖಾನ್.

ಜಗಳಕ್ಕೆ ಹಿನ್ನೆಲೆಯೇನೆಂದರೆ, ಕುಂದರ್ ತನ್ನ ಜೋಕರ್ ಚಿತ್ರದಲ್ಲಿ ಖಾನ್‌ಗೆ ನಟಿಸಬೇಕೆಂದು ಕೇಳಿದ್ದ. ಸ್ಕ್ರಿಪ್ಟನ್ನು ಇಷ್ಟಪಡದ ಖಾನ್ ಕೆಲ ಬದಲಾವಣೆಗಳನ್ನು ಹೇಳಿದ್ದರು. ಇದೇ ನೆಪ ಮಾಡಿಕೊಂಡು ಖಾನ್‌ಗೆ ಭಾರೀ ಘಮಂಡು ಸ್ಕ್ರಿಪ್ಟ್ ಬದಲಿಸಲು ಸಾಧ್ಯವಿಲ್ಲ ಎಂದೇಲ್ಲಾ ರಂಪಾಟ ಮಾಡಿದ್ದ ಕುಂದರ್. ತಕ್ಕ ಸಮಯಕ್ಕಾಗಿ ಕಾಯುತ್ತಿದ್ದ ಖಾನ್ ಮೌನದಿಂದಲೇ ಕುಂದರ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

ಆಫ್ ಕೋರ್ಸ್, ತಮ್ಮಿಬ್ಬರ ನಡುವೆ ಯಾವುದೇ ಜಗಳಗಳಿಲ್ಲ ಎಂದು ಇಬ್ಬರೂ ಹೇಳಿಕೆ ನೀಡಿದ್ದಾರೆ. ಈಗ ಖಾನ್ ಬಿಟ್ಟ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡುತ್ತಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada