»   » ಐಪಿಎಲ್ ಫೈನಲ್ ಗೆ ರೆಹಮಾನ್ ಜೈ ಹೋ

ಐಪಿಎಲ್ ಫೈನಲ್ ಗೆ ರೆಹಮಾನ್ ಜೈ ಹೋ

Posted By:
Subscribe to Filmibeat Kannada

ಏಪ್ರಿಲ್ 24 ಮತ್ತು 25ರಂದು ಖ್ಯಾತ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ಎರಡು ನೇರ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರಿಗೆ ಮುಖಾಮುಖಿಯಾಲಿದ್ದಾರೆ. ಇದಕ್ಕಾಗಿ ಅವರು ತಮ್ಮ ವಿಶ್ವಪರ್ಯಟನೆಯನ್ನು ಬದಿಗಿಟ್ಟು ಈ ನೇರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸುದೀರ್ಘ ಸಮಯದ ಬಳಿಕ ಮುಂಬೈರೆಹಮಾನ್ ಸಂಗೀತಕ್ಕೆ ಕಿವಿಯಾಗಲಿದೆ.

ಏಪ್ರಿಲ್ 24ರಂದು ಖ್ಯಾತ ನಿರ್ದೇಶಕ ಮಣಿರತ್ನಂ ಅವರ 'ರಾವಣ್' ಚಿತ್ರದ ಧ್ವನಿಸುರುಳಿಯನ್ನು ನೇರ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಲಿದ್ದಾರೆ. ಬಾಲಿವುಡ್ ಕೆಲವು ಪ್ರೇಕ್ಷಕರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಈ ಕರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ನೇರ ಕಾರ್ಯಕ್ರಮ ನಡೆಯಲಿದೆ.

ಏಪ್ರಿಲ್ 25ರಂದು ನವಿ ಮುಂಬೈನ ಡಿ ವೈ ಪಟೇಲ್ ಮೈದಾನದಲ್ಲಿ ಐಪಿಎಲ್ ಅಂತಿಮ ಪಂದ್ಯಾವಳಿ ನಡೆಯಲಿದೆ. ಐಪಿಎಲ್ ಅಂತಿಮ ಹಣಾಹಣಿಗೆ ರೆಹಮಾನ್ ನೇರ ಕಾರ್ಯಕ್ರಮ ಮತ್ತಷ್ಟು ರಂಗುತರಲಿದೆ. ಸದ್ಯಕ್ಕೆ ಗ್ರೀಕ್ ನಲ್ಲಿರುವ ಅಭಿಷೇಕ್ ಬಚ್ಚನ್ ಚಿತ್ರೀಕರಣವನ್ನು ಬದಿಗಿಟ್ಟು ರಾವಣ್ ಧ್ವನಿಸುರುಳಿ ಬಿಡುಗಡೆಗಾಗಿ ಮುಂಬೈ ವಿಮಾನ ಹತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada