For Quick Alerts
  ALLOW NOTIFICATIONS  
  For Daily Alerts

  'ದೋಬಿ ಘಾಟ್‌'ಗೆ ದೆಹಲಿ ಹೈಕೋರ್ಟ್ ಗ್ರೀನ್ ಸಿಗ್ನಲ್

  By Rajendra
  |

  ಅಮೀರ್ ಖಾನ್ ಪತ್ನಿ ಕಿರಣ್ ರಾವ್ ನಿರ್ದೇಶನದ 'ದೋಬಿ ಘಾಟ್' ಚಿತ್ರದ ಶೀರ್ಷಿಕೆ ಬಲವಾದ ವಿರೋಧ ವ್ಯಕ್ತವಾಗಿದೆ. ಶೀರ್ಷಿಕೆಗೆ ಹಿಂದೂಸ್ತಾನ್ ದೋಬಿ ಸಂಘಟನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ದೋಬಿ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ (ಸೆ.22) ವಜಾಗೊಳಿಸಿದೆ.

  ಚಿತ್ರದಲ್ಲಿ ದೋಬಿಗಳ ಬದುಕಿನ ಚಿತ್ರಣವಿದ್ದರೂ ಅದಕ್ಕೆ 'ದೋಬಿ ಘಾಟ್ 'ಎಂದು ಹೆಸರಿಟ್ಟಿರುವುದು ಸರಿಯಲ್ಲ. ಅದನ್ನು ಬದಲಾಯಿಸುವಂತೆ ಸಂಘಟನೆ ಅಧ್ಯಕ್ಷ ವಿನೋದ್ ಕುಮಾರ್ ಕನೋಜಿಯಾ ಒತ್ತಾಯಿಸಿದ್ದರು. ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಶೀರ್ಷಿಕೆಯಿಂದ ದೋಬಿ ಸಂಘಟನೆಗೆ ನೋವುಂಟಾಗುತ್ತದೆ ಎಂದು ಅವರು ಹೇಳಿದ್ದರು.

  ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠ 'ದೋಬಿ ಘಾಟ್' ಶೀರ್ಷಿಕೆ ಬದಲಾಯಿಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ. ಸಂವಿಧಾನವು ದೋಬಿ ಜನಾಂಗವನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಿದೆ. ಈ ಜನಾಂಗಕ್ಕೆ ಸೇರಿದ ವ್ಯಕ್ತಿಯನ್ನು ಜಾತಿಯ ಹೆಸರಿಟ್ಟು ಕರೆಯುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

  ಆದರೆ ಚಿತ್ರದ ಶೀರ್ಷಿಕೆ 'ದೋಬಿ ಘಾಟ್' ಒಂದು ಭೌಗೋಳಿಕ ಪ್ರದೇಶವನ್ನು ಸೂಚಿಸುತ್ತದೆ. ಯಾವುದೇ ಜಾತಿಯನ್ನು ಈ ಶೀರ್ಷಿಕೆ ಪ್ರಸ್ತಾಪಿಸುವುದಿಲ್ಲ. ಶೀರ್ಷಿಕೆಯಲ್ಲಿ ಸ್ಥಳವೊಂದನ್ನು ಪ್ರಸ್ತಾಪಿಸುವುದು ಅಪರಾಧವಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಶೀರ್ಷಿಕೆ ಬದಲಾವಣೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿದೆ.

  ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು "ಕಾನೂನು ಪ್ರಕ್ರಿಯ ನಿಂದನೆ " ಎಂದು ಪರಿಗಣಿಸಿರುವ ನ್ಯಾಯಾಲಯ ಅರ್ಜಿದಾರರಿಗೆ ರು.25,000 ದಂಡವನ್ನು ವಿಧಿಸಿದೆ. ದಂಡದ ಶುಲ್ಕವನ್ನು "ಅಂದರ ಪರಿಹಾರ ಒಕ್ಕೂಟ"ದಲ್ಲಿ ಭರಿಸುವಂತೆ ಆದೇಶಿಸಿದೆ. ಈ ಚಿತ್ರದಲ್ಲಿ ಅಮಿರ್ ಖಾನ್ ಪೈಂಟರ್ ಆಗಿ ಹಾಗೂ ಪ್ರತೀಕ್ ಬಬ್ಬರ್ ಲಾಂಡ್ರಿ ಬಾಯ್ ಆಗಿ ನಟಿಸಿದ್ದಾರೆ. ಈ ಚಿತ್ರ ಇತ್ತೀಚೆಗೆ ಟೊರಾಂಟೋ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಭಾರಿ ಪ್ರಶಂಸೆಗೆ ಪಾತ್ರವಾಗಿತ್ತು. ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X