For Quick Alerts
  ALLOW NOTIFICATIONS  
  For Daily Alerts

  ನಿರ್ದೇಶನದತ್ತ ಬಾಲಿವುಡ್ ಸುಂದರ ಜಾನ್ ಅಬ್ರಹಾಂ

  |

  ಬಾಲಿವುಡ್ ಸುಂದರಾಂಗ, ನಟ ಜಾನ್ ಅಬ್ರಹಾಂ, ವಿಕ್ಕಿ ಡೋನರ್ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ನಿರ್ಮಾಪಕ ಎನಿಸಿಕೊಂಡಿದ್ದಾರೆ. ಇದೀಗ ಯಶಸ್ವೀ ಪ್ರದರ್ಶನ ಕಾಣುತ್ತಿರುವ ವಿಕ್ಕಿ ಡೋನರ್ ಚಿತ್ರವನ್ನು ಕೇವಲ ನಿರ್ಮಾಣ ಮಾಡಿರುವ ಜಾನ್, ಆ ಚಿತ್ರದ ನಟನೆಯಿಂದ ದೂರವೇ ಉಳಿದಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ನಿರ್ದೇಶಕನಾಗುವ ಕನಸನ್ನು ಬಿಚ್ಚಿಟ್ಟಿದ್ದಾರೆ.

  39 ವರ್ಷದ ಜಾನ್ ಅಬ್ರಹಾಂ, ಇತ್ತೀಚಿಗೆ ನಟನೆಗಿಂತ ಹೆಚ್ಚಾನಿ ನಿರ್ಮಾಣದತ್ತ ಆಸಕ್ತಿ ವಹಿಸುತ್ತಿದ್ದಾರೆ. ಇದೀಗ ನಿರ್ದೇಶನಕ್ಕೂ ಇಳಿಯುವ ಆಸೆ ಹಾಗೂ ಯೋಜನೆ ಹೊರಗೆಡವಿದ್ದಾರೆ. ತಮ್ಮ ಚೊಚ್ಚಿಲ ಚಿತ್ರ 'ವಿಕ್ಕಿ ಡೋನರ್' ಯಶಸ್ಸಿನಿಂದ ಸಖತ್ ಖುಷಿಯಾಗಿರುವ ಜಾನ್ ಇದೀಗ ಒಂದರಹಿಂದೊಂದು ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ.

  ಇದೀಗ ಕುನಾಲ್ ರಾಯ್ ಕಪೂರ್ ನಟನೆ, ಆದಿತ್ಯ ಭಟ್ಟಾಚಾರ್ಯ ನಿರ್ದೇಶನದ ಪಕ್ಕಾ ಹಾಸ್ಯ ಚಿತ್ರವೊಂದನ್ನು ನಿರ್ಮಿಸುತ್ತಿರುವ ಜಾನ್, ನಂತರ ಶೂಜಿತ್ ಸಿರ್ಕಾರ್ ಜೊತೆ 'ಜಾಫ್ನಾ' ಚಿತ್ರ ನಿರ್ಮಿಸಲಿದ್ದಾರೆ. ನಂತರ ವಿಕ್ಕಿ ಡೋನರ್ ನಟ ಆಯುಷ್ಮಾನ್ ಜೊತೆ 'ಹಮಾರಾ ಬಜಾಜ್' ಎಂಬ ಅಪರೂಪದ ಚಿತ್ರ ಮಾಡುವ ಯೋಜನೆಗೆ ಜಾನ್ ಬದ್ಧರಾಗಿದ್ದಾರೆ.

  ಸದ್ಯಕ್ಕೆ ಅವರು ತಮ್ಮ ನಟನೆಯ 'ಮಿ ಔರ್ ಮೈ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಧ್ಯೆ ಮಧ್ಯೆ ಪ್ಲಾನ್, ಚಿತ್ರ ನಿರ್ಮಾಣ, ಸಪೋರ್ಟಿಂಗ್ ಕ್ಯಾರಾಕ್ಟರ್ ಹೀಗೆ ವಿಭಿನ್ನತೆ ಮೆರೆದು ಬಾಲಿವುಡ್ ನಲ್ಲಿ ಅಮೀರ್ ಖಾನ್ ಅವರಂತೆ 'ಆಲ್ ರೌಂಡರ್' ದಾರಿಯಲ್ಲಿ ಸಾಗುತ್ತಿದ್ದಾರೆ. ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. (ಏಜೆನ್ಸೀಸ್)

  English summary
  John Abraham has hit the jackpot with his maiden production venture, Vicky Donor. And John is now planning to try his hand at direction.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X