»   » ಸಲ್ಮಾನ್, ಶಾರುಖ್ ಮೀರಿಸಿದ ಸಚಿನ್ ತೆಂಡೂಲ್ಕರ್

ಸಲ್ಮಾನ್, ಶಾರುಖ್ ಮೀರಿಸಿದ ಸಚಿನ್ ತೆಂಡೂಲ್ಕರ್

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರನ್ನು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೋಲಿಸಿದ್ದಾರೆ. ಆಶ್ಚರ್ಯ ಪಡಬೇಡಿ, ಸಚಿನ್ ಸೋಲಿಸಿದ್ದು ಕ್ರಿಕೆಟ್ ನಲ್ಲೂ ಅಲ್ಲ, ಬಾಲಿವುಡ್ ಚಿತ್ರಜಗತ್ತಿನಲ್ಲೂ ಅಲ್ಲ. ಯೂಥ್ ಐಕಾನ್ ಸ್ಪರ್ಧೆಯಲ್ಲಿ. ಇದು ಯುವಜನತೆ ಆಯ್ಕೆ ಆಧರಿಸಿದ ಫಲಿತಾಂಶ.

ಸರ್ವೆ ವರದಿಯಂತೆ, 15-24 ವರ್ಷ ವಯಸ್ಸಿನ ತರುಣ ಜನಾಂಗ ತಮ್ಮ 'ರೋಲ್ ಮಾಡೆಲ್' ಯಾರೆಂಬ ಪ್ರಶ್ನೆಗೆ 3 ಜನರ ಹೆಸರನ್ನು ಉಲ್ಲೇಖಿಸಿದ್ದಾರೆ. ಅವರಲ್ಲಿ ಸಚಿನ್, ಸಲ್ಮಾನ್ ಹಾಗೂ ಶಾರುಖ್ ಅವರಿಗಿಂತ ಹೆಚ್ಚು ಓಟು ಪಡೆದಿದ್ದಾರೆ. ಆಶ್ಚರ್ಯವೆಂದರೆ, ವಿರಾಟ್ ಕೊಹ್ಲಿ, ರಣಬೀರ್ ಕಪೂರ್ ಹಾಗೂ ಇಮ್ರಾನ್ ಖಾನ್ ಅವರುಗಳು ಟಾಪ್ 10 ಪಟ್ಟಿಯಲ್ಲೂ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಬ್ರಾಂಡ್ ಇಕ್ವಿಟಿ ನಡೆಸಿದ ಈ ಸರ್ವೆಯಲ್ಲಿ ಸ್ಪರ್ಧೆಯಲ್ಲಿದ್ದ ಸೆಲೆಬ್ರಿಟಿಗಳ ಸಾಮಾನ್ಯ ವಯಸ್ಸು 43 ಎಂದು ನಿಗದಿಪಡಿಸಲಾಗಿತ್ತು. ಎಲ್ಲಾ ಸ್ಪರ್ಧಿಗಳಲ್ಲಿ ಸಚಿನ್, ಶಾರುಖ್ ಹಾಗೂ ಸಲ್ಮಾನ್ ಈ ಮೂವರೂ ಅವರವರ ವೃತ್ತಿಗಳಲ್ಲಿ ಟ್ರೆಂಡ್ ಸೆಟ್ಟರ್ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಅವರಲ್ಲಿ ಸಚಿನ್ 'ಟಾಪ್ ಒನ್' ಸ್ಥಾನ ಅಲಂಕರಿಸಿದ್ದಾರೆ. (ಏಜೆನ್ಸೀಸ್)

English summary
Bollywood superstars Shahrukh Khan and Salman Khan have been beaten by cricketer Sachin Tendulkar, who has topped the survey of the Brand Equity Most Exciting Youth Brands, while SRK and Salman landed in second and third spots. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X