»   » ಗಾಂಧೀಪರ ಸಂಸ್ಥೆಯಿಂದ ಸಂಜಯದತ್ ಗಾಂಧಿಗಿರಿಗೆ ಗೌರವ

ಗಾಂಧೀಪರ ಸಂಸ್ಥೆಯಿಂದ ಸಂಜಯದತ್ ಗಾಂಧಿಗಿರಿಗೆ ಗೌರವ

Posted By:
Subscribe to Filmibeat Kannada

ಬೆಂಗಳೂರು, ನ.22 : 'ಲಗೇ ರಹೋ ಮುನ್ನಾಭಾಯ್" ಸಿನಿಮಾದ ಮೂಲಕ ಗಾಂಧಿಗಿರಿಯನ್ನು ಪ್ರಚುರಪಡಿಸಿದ್ದಕ್ಕಾಗಿ ಗಾಂಧಿ ವಿಚಾರ ಆಂದೋಲನ ಸಂಸ್ಥೆ ಸಂಜಯದತ್ ಗೆ ಸನ್ಮಾನ ಮಾಡಲು ಮುಂದಾಗಿದೆ.

ಸಂಜಯ್ ದತ್, ವಿದ್ಯಾಬಾಲನ್, ಬೊಮನ್ ಇರಾನಿ, ದಿಯಾ ಮಿರ್ಜಾ, ಜಿಮ್ಮಿ ಶೇರ್‌ಗಿಲ್ ತಾರಾಗಣದ, ರಾಜ್‌ಕುಮಾರ್ ಹಿರಾನಿ ನಿರ್ದೇಶನದ, ವಿಧು ವಿನೋದ್ ಚೋಪ್ರ ನಿರ್ಮಾಣದ 'ಲಗೇ ರಹೋ ಮುನ್ನಾಬಾಯ್" ಗಾಂಧಿಗಿರಿಯನ್ನು ಸಾರಿದ ಹಿಂದಿ ಚಿತ್ರ. 'ಲಗೇ ರಹೋ..' ಚಿತ್ರದ ಮೂಲಕ ಸಂಜಯ್ ದತ್ ಗಾಂಧೀತತ್ವ ಪ್ರಚಾರ ಮಾಡಿದ್ದಾರೆ. ಸ್ವಾತಂತ್ರ್ಯಾನಂತರ ಯಾರೂ ಮಾಡದ ಸಾಧನೆ ದತ್ ಮಾಡಿದ್ದಾರೆ ಎಂದು ಗಾಂಧಿ ವಿಚಾರ ಆಂದೋಲನದ ಅಧ್ಯಕ್ಷ, ಗಾಂಧಿವಾದಿ ಹಾಗೂ ಸ್ವಾತಂತ್ರ್ಯ ಯೋಧ ಮೇವಾಲಾಲಾ ಗುಪ್ತಾ(93) ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada