For Quick Alerts
  ALLOW NOTIFICATIONS  
  For Daily Alerts

  ಇತ್ತ ಕಡೆ ಸೋನಾ ಬೇಕು, ಅತ್ಲ ಕಡೆ ಇಶಾ ಬೇಕು: ಕಮಲ್

  By Mahesh
  |

  ಭಾರತದ ಪ್ರಬುದ್ಧ ನಟ, ಸುಂದರಾಂಗ ಕಮಲ್ ಹಾಸನ್ ಗೆ ಎಳೆ ಬಾಲೆಯರು ಜೋಡಿಯಾಗಿದ್ದಾರೆ. ಕಮಲ್ ತಮ್ಮ ಹೊಸ ಚಿತ್ರ ವಿಶ್ವರೂಪಂಗೆ 'ದಬ್ಬಾಂಗ್' ಖ್ಯಾತಿಯ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಖಾನ್ ಗೆಳತಿ ಇಶಾ ಶರ್ವಾನಿ ಇಬ್ಬರನ್ನು ಹಾಕಿಕೊಂಡಿದ್ದಾರೆ. ಇಶಾ ಎರಡನೆ ನಾಯಕಿಯಾದರೂ ಆಕೆಯ ನೃತ್ಯ ನೈಪುಣ್ಯತೆಗೆ ಸವಾಲಾಗುವಂಥ ಪಾತ್ರ ಈ ಚಿತ್ರದಲ್ಲಿದೆ ಎನ್ನುತ್ತಿದೆ ಚಿತ್ರ ತಂಡ.

  ಕಥಕ್, ಕಳರಿಪಯಟ್ಟು ಸೇರಿದಂತೆ ಎಲ್ಲಾ ಶಾಸ್ತ್ರೀಯ ನೃತ್ಯಗಳನ್ನು ಕಲಿತಿರುವ ಇಶಾ ಹಿಂದಿ ಚಿತ್ರಗಳಲಿ ಮಿಂಚಿದ್ದು ಕಮ್ಮಿ. ಕಿಸ್ನಾದಲ್ಲಿ ಹೃತಿಕ್ ಜೊತೆ ಡಾನ್ಸ್ ಫೇಮಸ್ ಆಗಿದ್ದು ಬಿಟ್ಟರೆ, ಲಕ್ ಬೈ ಚಾನ್ಸ್, ಯೂ ಮಿ ಔರ್ ಹಮ್ ಚಿತ್ರಗಳು ಸುದ್ದಿ ಮಾಡಲಿಲ್ಲ. ಆದರೆ, ಆಕೆ ಹೆಚ್ಚು ಸುದ್ದಿ ಮಾಡಿದ್ದು ಪೇಜ್ 3 ಯಲ್ಲಿ ವೇಗಿ ಜಹೀರ್ ಖಾನ್ ಜೊತೆಯಲ್ಲಿ ಮಾತ್ರ.

  ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ವಿಶ್ವರೂಪಂ ಚಿತ್ರಕ್ಕೆ ಸರಿಸುಮಾರು 150 ಕೋಟಿ ರು ಬಜೆಟ್ ಫಿಕ್ಸ್ ಮಾಡಲಾಗಿದೆ. ಈ ಚಿತ್ರದಲ್ಲಿ ಕಮಲ್ ವಿಶ್ವರೂಪವನ್ನು ಕಾಣಬಹುದು. ಚಿತ್ರಕಥೆ, ಗೀತ ಸಾಹಿತ್ಯ, ಸಂಭಾಷಣೆ, ನಟನೆ ಹಾಗೂ ನಿರ್ದೇಶನದ ಹೊಣೆ ಕಮಲ್ ಅವರದ್ದೆ. ಶಂಕರ್, ಎಹಸಾನ್ ಮತ್ತು ಲಾಯ್ ಸಂಗೀತದ ಹೊಣೆ ಹೊತ್ತಿದ್ದಾರೆ. ಆಗಸ್ಟ್ ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಯುರೋಪ್ ನಲ್ಲಿ ಬಹುತೇಕ ಶೂಟಿಂಗ್ ನಡೆಯಲಿದೆ.

  English summary
  After Sonakshi Sinha Zaheer Khan's girl friend Isha Sharvani has been chosen to romance with Kamal Hassan in Vishwaroopam. She has been selected because she is a fine dancer. Vishwaroopam will be a trilingual shot in Tamil, Telugu, and Hindi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X