For Quick Alerts
  ALLOW NOTIFICATIONS  
  For Daily Alerts

  ಡರ್ಟಿ ಪಿಕ್ಚರ್ ನೋಡದೆ ನಿರಾಶರಾದ ಪ್ರೇಕ್ಷಕರು

  By Prasad
  |

  'ದಿ ಡರ್ಟಿ ಪಿಕ್ಚರ್'ಗೆ ರಾಷ್ಟ್ರೀಯ ಪ್ರಶಸ್ತಿ ಕೊಟ್ಟು ಈಗ ಚಿತ್ರ 'ಯಾಕ್ ಥೂ ಡರ್ಟಿ' ಮಕ್ಕಳ ಜೊತೆ ಕುಟುಂಬದವರು ಚಿತ್ರ ನೋಡಲು ಯೋಗ್ಯವಲ್ಲ ಅಂದ್ರೆ ಪ್ರಶಸ್ತಿ ಕೊಟ್ಟ ಸರಕಾರದ ಆಷಾಡಭೂತಿತನವಲ್ಲದೆ ಇನ್ನೇನು? ಎಂದು ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದ ನಿರಾಶ ಪ್ರೇಕ್ಷಕರು ಸರಕಾರದ ಮೇಲೆ ಯಾಕ್ ಥೂ ಎಂದು ಉಗಿಯುತ್ತಿದ್ದಾರೆ.


  ಸೋನಿ ಟಿವಿ ಈ ಚಿತ್ರವನ್ನು ಏ.22ರಂದು ಭಾನುವಾರ ಪ್ರದರ್ಶಿಸುವುದಾಗಿ ಡಂಗುರ ಸಾರಿತ್ತು. ಇಷ್ಟು ದಿನ ಕಣ್ಣುಮುಚ್ಚಿ ಕುಳಿತಿದ್ದ ಕೇಂದ್ರ ಸರಕಾರ ಜ್ಞಾನೋದಯವಾದಂತೆ ಎಚ್ಚೆತ್ತು, ಚಿತ್ರ ಪ್ರದರ್ಶಿಸಬೇಕಿದ್ದರೆ ಮಕ್ಕಳು ಮಲಗಿಕೊಂಡ ಮೇಲೆ ರಾತ್ರಿ 11ರ ನಂತರ ಪ್ರದರ್ಶಿಸಿ ಎಂದು ಆದೇಶ ಹೊರಡಿಸಿದೆ. ಇದ್ದಕ್ಕಿದ್ದಂತೆ ಈ ರೀತಿ ಆದೇಶ ಹೊರಡಿಸಲು ಇರುವ 'ನಿಜವಾದ' ಕಾರಣವೇನು?

  ಪ್ರೇಕ್ಷಕರು ಮಾತ್ರವಲ್ಲ ಹಿಂದಿ ಚಿತ್ರರಂಗ ದಿಗ್ಗಜರೆಲ್ಲ ಚಿತ್ರವನ್ನು ಬೆಳಕಿರುವಾಗ ಪ್ರದರ್ಶಿಸಬಾರದೆಂದು ಹೇರುವುದನ್ನು ಖಂಡತುಂಡವಾಗಿ ಖಂಡಿಸಿವೆ. "ಈ ಕಾರಣಕ್ಕೇ ನಾನು ಚಿತ್ರ ನಿರ್ದೇಶಿಸುವುದನ್ನೇ ಬಿಟ್ಟುಬಿಟ್ಟೆ" ಎಂದು ಮಹೇಶ್ ಭಟ್ ಹೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರ ಮಗಳು ಪೂಜಾ ಭಟ್ "ಡರ್ಟಿ ಪಿಕ್ಚರ್‌ಗಿಂತ ಡರ್ಟಿಯಾಗಿ, ಅಡಲ್ಟ್ ಸ್ಟಾರ್ ಸನ್ನಿ ಲಿಯೋನ್ ಜೊತೆ ಜಿಸ್ಮ್2 ತೆಗೆಯುತ್ತೇನೆ. ನನಗೆ ಹಗಲು ಹೊತ್ತಿನ ಸ್ಲಾಟೇ ಬೇಕು" ಎಂದು ಹಲ್ಲು ಕಟಕಟನೆ ಮಸೆದಿದ್ದಾರೆ.

  ಬಿಚ್ಚುಮಾತಿಗೆ ಹೆಸರಾಗಿರುವ ಫ್ಯಾಮಿಲಿ ಡೈರೆಕ್ಟರ್ ಕರಣ್ ಜೋಹರ್ "ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರವನ್ನು ರಾಷ್ಟ್ರದ ಜನತೆಗೆ ತೋರಿಸಬಾರದೆ? ಇದು ಹಿಪಾಕ್ರಸಿ ಅಲ್ಲದೆ ಮತ್ತೇನೂ ಅಲ್ಲ" ಎಂದು ಕೆಂಡ ಕಾರಿದ್ದಾರೆ. ಕಿಸ್ಸರ್ ಬಾಯ್ ಮತ್ತು ಚಿತ್ರದ ನಾಯಕ ಇಮ್ರಾನ್ ಹಶ್ಮಿ ಕೂಡ 'ಸರಕಾರ ಈ ರೀತಿ ಮಾಡಬಾರದಿತ್ತು' ಎಂದು ಮುತ್ತಿನಂಥ ಮಾತು ಹೇಳಿದ್ದಾರೆ. ಪ್ರದರ್ಶನಕ್ಕೆ ಯೋಗ್ಯವಲ್ಲದಿದ್ದರೆ ನಟಿ ವಿದ್ಯಾ ಬಾಲನ್‍ಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿದ್ದೇಕೆ? ಎಂದು ಮಗದೊಬ್ಬರು ಪ್ರಶ್ನಿಸಿದ್ದಾರೆ.

  ಟ್ಟಿಟ್ಟಿಗರೊಬ್ಬರ ಕಾಮೆಂಟ್ ಹೀಗಿದೆ : "ಚಿತ್ರಕ್ಕೆ ಈಮೊದಲೇ 59 ಕಟ್‌ಗಳಾಗಿ ಯು/ಎ ಸರ್ಟಿಫಿಕೇಟ್ ನೀಡಿದ್ದರೂ, ರಾಜಕಾರಣಿಗಳು ಇನ್ನಷ್ಟು ಕಟ್ ಬಯಸಿದ್ದರಿಂದ ಚಿತ್ರದ ಪ್ರದರ್ಶನವನ್ನು ತಡೆಹಿಡಿಯಲಾಗಿದೆ. ಚೆನ್ನಾಗಿರುವ ದೃಶ್ಯಗಳನ್ನೆಲ್ಲ ತೆಗೆದು, ಹಸಿಹಸಿ ಪ್ರಣಯದ ದೃಶ್ಯಗಳಷ್ಟೇ ಅವರಿಗೆ ಬೇಕು" ಎಂದು ವ್ಯಂಗ್ಯವಾಡಿದ್ದಾರೆ. ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ದೇಶದಲ್ಲಿ ಪ್ರಜಾಪ್ರಭುತ್ವವಾದರೂ ಎಲ್ಲಿದೆ ಎಂದು ಮತ್ತೊಬ್ಬ ಟ್ವಿಟ್ಟಿಗ ಕಿಡಿಕಾರಿದ್ದಾರೆ.

  English summary
  Ardent film lovers, film personalities are venting ire on central govt for asking Sony not to air The Dirty Picture at prime time. The much awaited picture on TV was cancelled on Sunday, April 22. Actress Vidya Balan has won Best Actress national award for the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X