ಮಾನಸಿಕ, ದೈಹಿಕ ಕುಂಠಿತ ಪದ ಬಳಕೆ ಬಿಡಿ ಎಂದ ಅಕ್ಕಿ
'ಅಂಗವಿಕಲರು' ಎಂಬ ಪದ ಬಳಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲರಾದವರನ್ನು ಮತ್ತಷ್ಟು ದುರ್ಬಲಗೊಳಿಸುತ್ತ್ತದೆ ಎಂಬ ಮಾತು ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ತಡವಾಗಿಯಾದರೂ ಅರ್ಥವಾದಂತಿದೆ. 'ಮಾನಸಿಕ' ಮತ್ತು 'ದೈಹಿಕ ಕುಂಠಿತ' ಎಂಬ ಪದ ಬಳಸುವುದನ್ನು ಬಿಡಿ ಎಂದು ಅಕ್ಕಿ ಕರೆ ನೀಡಿದ್ದಾರೆ.
ಮಾನಸಿಕ ಹಾಗೂ ದೈಹಿಕವಾಗಿ ದುರ್ಬಲರಾದವನ್ನು ಸಮಾಜದಲ್ಲಿ ಕಡೆಗಣಿಸಲಾಗುತ್ತಿದೆ. ಅವರ ಅಂಗವೈಕಲ್ಯತೆಯನ್ನು ಬದಿಗೊತ್ತಿ ಅವರಿಗೂ ಸಮಾನ ಅವಕಾಶ, ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ ಎಂದು ಅಕ್ಕಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಮಾನಸಿಕ ಮತ್ತು ದೈಹಿಕ ಕುಂಠಿತ ಎಂಬ ಪದ ಬಳಕೆಯನ್ನು ಬಿಟ್ಟು ಅವರನ್ನು ಪ್ರೋತ್ಸಾಹಿಸೋಣ. ಇದು ಕೇವಲ ನನ್ನೊಬ್ಬನಿಂದ ಆಗುವ ಕೆಲಸವಲ್ಲ. ಬಾಲಿವುಡ್ ಚಿತ್ರರಂಗದ ಸಹಾಯ, ಸಹಕಾರ ಸಹ ಅಗತ್ಯ ಎಂದಿದ್ದಾರೆ. ಅಕ್ಕಿಯ ಈ ಮಾತಿಗೆ ಬಾಲಿವುಡ್ ಬೆಂಬಲ ವ್ಯಕ್ತಪಡಿಸಿದೆ.
More from Filmibeat
ಅಕ್ಷಯ್ ಕುಮಾರ್ ಬಾಲಿವುಡ್ ಅಂಗವಿಕಲ ವಿಕಲಚೇತನ ಟ್ವಿಟ್ಟರ್ akshay kumar mentally retard twitter physically retard


Click it and Unblock the Notifications











