»   »  ಸಲ್ಲೂ, ಕತ್ರೀನಾ ವಿವಾಹ; ಸಾಮ್ನಾದಲ್ಲಿ ವರದಿ!

ಸಲ್ಲೂ, ಕತ್ರೀನಾ ವಿವಾಹ; ಸಾಮ್ನಾದಲ್ಲಿ ವರದಿ!

Posted By:
Subscribe to Filmibeat Kannada
Are Salman Khan and Katrina Kaif married?
ಬಾಲಿವುಡ್ ನ ಹಳೆಯ ಪ್ರೇಮಿಗಳು ಸಲ್ಮಾನ್ ಖಾನ್ ಮತ್ತ್ತು ಕತ್ರಿನಾ ಕೈಫ್ ಮದುವೆಯಾಗಿದ್ದಾರೆ ಎಂದು ಮಾರಾಠಿ ದೈನಿಕ 'ಸಾಮ್ನಾ' ವರದಿ ಮಾಡಿದೆ. ಕಡೆಗೂ ಸಲ್ಮಾನ್ ಖಾನ್ ಹೃದಯಕ್ಕಾದ ಗಾಯ ವಾಸಿ ಮಾಡಿಕೊಂಡಿದ್ದಾರಲ್ಲಾ ಎಂದು ಸಮಾಧಾನ ಪಡುವ ವೇಳೆಗೆ ಆ ಸುದ್ದಿ ತಿರುವುಮರುವಾಗಿದೆ!

ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಜನ್ಮ ದಿನವಾದ ಜ.23ರಂದು ಪ್ರಕಟವಾದ ಸಾಮ್ನಾ ಪತ್ರಿಕೆಯಲ್ಲಿ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಸಂದರ್ಶನವನ್ನ್ನು ಪ್ರಕಟಿಸಲಾಗಿದೆ. ಆ ಸಂದರ್ಶನದಲ್ಲಿ ಸಲೀಮ್ ಖಾನ್ ತಮ್ಮ ಪುತ್ರ ಸಲ್ಲೂಗೂ, ಕತ್ರಿನಾಗೂ ವಿವಾಹವಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಇದು ಸುಳ್ಳು ಎಂದು ಸಲೀಮ್ ಖಾನ್ ನಂತರ ಸ್ಪಷ್ಟಪಡಿಸಿದ್ದಾರೆ.

ಸಾಮ್ನಾ ಪತ್ರಕರ್ತ ಜಾತ್ಯಾತೀತ ಮೌಲ್ಯಗಳ ಬಗ್ಗೆ ಪ್ರಶ್ನಿಸುವಾಗ ಕೆಲ ಉದಾಹರಣೆಗಳನ್ನು ಕೊಟ್ಟಿದ್ದೆ. ಅರ್ಬಾಜ್ ಕ್ರೈಸ್ತ ಹುಡುಗಿ ಮಲೈಕಾಳನ್ನು, ಸೋಹೈಲ್ ಹಿಂದು ಹುಡುಗಿ ಸೀಮಾರನ್ನು ವಿವಾಹವಾಗಿದ್ದಾರೆ. ಅದೇ ರೀತಿ ಸಲ್ಮಾನ್ ಖಾನ್ ಮುಸ್ಲಿಂ ಹುಡುಗಿ ಕತ್ರೀನಾ ಕೈಫ್ ಜೊತೆ ಇದ್ದಾನೆ ಎಂದಿದ್ದೆ. ಸಾಮ್ನಾ ನನ್ನ ಸಂದರ್ಶನವನ್ನು ತಿರುಚಿದೆ ಎಂದು ಅವರು ಈಗ ಆಕ್ಷೇಪಿಸಿದ್ದಾರೆ. ಸಲ್ಮಾನ್ ಖಾನ್ ರ ಐಲು ಪೈಲುಗಳಿಂದ ರೋಸಿ ಹೋಗಿದ್ದ ಕತ್ರೀನಾ ಆತನಿಂದ ದೂರ ಸರಿದಿದ್ದರು. ಈಗ ಮತ್ತೆ ಅವರಿಬ್ಬರೂ ಒಂದಾಗಿ ಪತ್ರಿಕೆಗಳ ಗಾಸಿಪ್ ಪುಟಗಳನ್ನು ಅಲಂಕರಿಸುತ್ತಿರುವು ಸುಳ್ಳಲ್ಲ.

(ಏಜೆನ್ಸೀಸ್)


ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada