»   »  ಕುರ್ಬಾನ್ ಚಿತ್ರದಲ್ಲಿ ಬೆತ್ತಲಾದ ಕರೀನಾ ಕಪೂರ್!

ಕುರ್ಬಾನ್ ಚಿತ್ರದಲ್ಲಿ ಬೆತ್ತಲಾದ ಕರೀನಾ ಕಪೂರ್!

Subscribe to Filmibeat Kannada

ಕರೀನಾ ಕಪೂರ್ ಮತ್ತು ಸೈಫ್ ಆಲಿಖಾನ್ ನಟಿ ಸುತ್ತಿರುವ ತಾಜಾ ಚಿತ್ರ 'ಕುರ್ಬಾನ್'. ಈ ಚಿತ್ರ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದೆ. ಸೈಫ್ ಆಲಿಖಾನ್ ರೊಂದಿಗೆ ಗಾಢ ಚುಂಬನ ದೃಶ್ಯದಲ್ಲೂ ಕರೀನಾ ಕಾಣಿಸಲಿದ್ದಾರೆ. ಈ ಚುಂಬನ ದೃಶ್ಯ ತೆರೆಯ ಮೇಲೆ ಎರಡೂವರೆ ನಿಮಿಷಗಳಿಗೂ ಅಧಿಕ ಸಮಯ ಇರುತ್ತದಂತೆ. ಇದೀಗ ಬೆತ್ತಲಾಗಿರುವ ಭಿತ್ತಿಪತ್ರಗಳು ಪ್ರಮುಖ ಪತ್ರಿಕೆಗಳಲ್ಲಿ ಕಣ್ಣಿಗೆ ರಾಚುತ್ತಿವೆ!

'ಕುರ್ಬಾನ್'ಚಿತ್ರದ ಭಿತ್ತಿಪತ್ರಗಳು ಪ್ರಮುಖ ಇಂಗ್ಲಿಷ್ ದೈನಿಕಗಳಲ್ಲಿ ಪ್ರಕಟವಾಗಿವೆ. ಈ ಭಿತ್ತಿಪತ್ರಗಳಲ್ಲಿ ಕರೀನಾ ಮತ್ತು ಸೈಫ್ ಸಂಪೂರ್ಣ ಬೆತ್ತಲಾಗಿ ಕಾಣಿಸಿದ್ದಾರೆ. ಇಬ್ಬರ ಮೈಮೇಲೆ ಬಟ್ಟೆಗಳೇ ಇಲ್ಲದಿರುವುದು ಹೊಸ ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ಟುಮಾರೋ ಚಿತ್ರಕ್ಕಾಗಿ ಬ್ಯಾಂಡಿಡ್ ಕ್ವೀನ್ ಖ್ಯಾತಿಯ ಸೀಮಾ ಬಿಸ್ವಾಸ್ ಅರೆಬೆತ್ತಲಾಗಿ ವಿವಾದ ಸೃಷ್ಟಿಸಿದ್ದರು. ಇದೀಗ ಅದೇ ರೀತಿಯ ಬೆತ್ತಲೇ ದೃಶ್ಯದಲ್ಲಿ ಕರೀನಾ ಕಾಣಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟ ಓಂ ಪುರಿ ಸಹ ವಿಭಿನ್ನ ಪಾತ್ರವನ್ನು ಪೋಷಿಸುತ್ತಿದ್ದಾರೆ. ಅವರು ಉಗ್ರವಾದಿಯಾಗಿ ಕುರ್ಬಾನ್ ಚಿತ್ರದಲ್ಲಿ ಕಾಣಿಸಲಿರುವುದು ವಿಶೇಷ. ತಮ್ಮ ವೈಯಕ್ತಿಕ ಬದುಕಿಗೆ ತೊಡಕಾಗುತ್ತದೆ ಎಂಬ ಕಾರಣಕ್ಕೆ ಉಗ್ರವಾದಿ ಪಾತ್ರ ಪೋಷಣೆಗೆ ಯಾರು ಮುಂದೆಬಂದಿರಲಿಲ್ಲ. ಆದರೆ ಓಂ ಪುರಿ ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಬಾಲಿವುಡ್ ಚಿತ್ರಜಗತ್ತು ಪ್ರಚಾರಕ್ಕಾಗಿ ಕಲಾವಿದರ ಬಟ್ಟೆಗಳನ್ನು ಬಿಚ್ಚಿಸುತ್ತಿರುವುದು ಇದೇ ಮೊದಲಲ್ಲ. ಅಂದಹಾಗೆ ಕುರ್ಬಾನ್ ಚಿತ್ರ ನವೆಂಬರ್ 27ಕ್ಕೆ ಬಿಡುಗಡೆಯಾಗಲಿದೆಯಂತೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...