»   » ಮೊದಲ ದಿನವೇ 21 ಕೋಟಿ ಕೊಳ್ಳೆ ಹೊಡೆದಕೈಟ್ಸ್

ಮೊದಲ ದಿನವೇ 21 ಕೋಟಿ ಕೊಳ್ಳೆ ಹೊಡೆದಕೈಟ್ಸ್

Posted By:
Subscribe to Filmibeat Kannada

ಋತಿಕ್ ರೋಷನ್ ಹಾಗೂ ಬಾರ್ಬರಾ ಮೋರಿ ಅಭಿನಯದ 'ಕೈಟ್ಸ್' ಚಿತ್ರಕ್ಕೆ ದೇಶದಾದ್ಯಂತ ಭರ್ಜರಿ ಆರಂಭ ಸಿಕ್ಕಿದೆ. ಈ ಚಿತ್ರ ಮೊದಲ ದಿನವೇ ಸುಮಾರು ರು.21 ಕೋಟಿಗಳನ್ನು ಬಾಕ್ಸಾಫೀಸಲ್ಲಿ ಕೊಳ್ಳೆ ಹೊಡೆದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಗಳನ್ನು ಮೀರಿ ಬಿಡುಗಡೆಯಾಗಿದ್ದ ಕಾರಣ ರಾಜ್ಯದಲ್ಲಿ 'ಕೈಟ್ಸ್' ಬಿಡುಗಡೆಯನ್ನು ತಡೆಹಿಡಿಯಲಾಗಿತ್ತು.

ರಿಲಾಯನ್ಸ್ ಬಿಗ್ ಫಿಕ್ಚರ್ಸ್ ಲಾಂಛನದಲ್ಲಿ ಮೂಡಿಬಂದ 'ಕೈಟ್ಸ್' ಚಿತ್ರ 30 ದೇಶಗಳಲ್ಲಿ ಬಿಡುಗಡೆಯಾಗಿದೆ. ಸುಮಾರು 2,500 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕರನ್ನು ರಂಜಿಸುತ್ತಿದೆ. ಕೈಟ್ಸ್ ಚಿತ್ರ ಮೊದಲ ದಿನವೇ ಸುಮಾರು ಹತ್ತು ಸಾವಿರ ಪ್ರದರ್ಶನ ಕಂಡಿದ್ದು ಇದೊಂದು ದಾಖಲೆಯಾಗಿದೆ ಎಂದು ರಿಲಾಯನ್ಸ್ ಬಿಗ್ ಪಿಕ್ಚರ್ಸ್ ಸಿಇಒ ಸಂಜೀವ್ ಲಾಂಬಾ ತಿಳಿಸಿದ್ದಾರೆ.

ಚಿತ್ರದಲ್ಲಿ ಪ್ರೇಮ, ಪ್ರಣಯ , ಮೈ ನವಿರೇಳಿಸುವ ಸಾಹಸ ದೃಶ್ಯಗಳು ಪ್ರೇಕ್ಷಕರ ಮೈಬಿಸಿಯೇರಿಸುತ್ತಿವೆ. ಕೈಟ್ಸ್ ಚಿತ್ರ ಹಿಂದಿ, ಇಂಗ್ಲಿಷ್ ಹಾಗೂ ಸ್ಪಾನಿಷ್ ಭಾಷೆಗಳಲ್ಲಿ ಬಿಡುಗಡೆಗೊಂಡಿದೆ. ನಿರ್ಮಾಪಕ ರಾಕೇಶ್ ರೋಷನ್ ಅವರ ಜೇಬು ಭರ್ತಿ ಮಾಡುವಲ್ಲಿ ಚಿತ್ರ ಮುನ್ನುಗ್ಗುತ್ತಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada