For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿಪರದೆಗೆ ರಾಜೀವ್ ಗಾಂಧಿ ರಿಯಲ್ ಸ್ಟೋರಿ

  By Rajendra
  |

  ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ನೈಜ ಕತೆಯಾಧಾರಿತ ಚಿತ್ರವೊಂದು ಬಾಲಿವುಡ್‌ನಲ್ಲಿ ಸೆಟ್ಟೇರಲಿದೆ. ಈ ಚಿತ್ರವನ್ನು ಭಾವನಾ ತಲ್ವಾರ್ ನಿರ್ಮಿಸಲಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವ ನಿರ್ಮಾಪಕರು, ರಾಜೀವ್ ಗಾಂಧಿ ಮೇಲೆ ಚಿತ್ರ ಮಾಡುತ್ತಿರುವುದಂತೂ ನಿಜ ಎಂದಿದ್ದಾರೆ.

  "ಈ ಚಿತ್ರದ ಬಗ್ಗೆ ಹೆಚ್ಚಿಗೆ ಹೇಳಲು ಇನ್ನೂ ಸಮಯ ಕೂಡಿಬಂದಿಲ್ಲ. ಇದು ಒಂದು ಚಿತ್ರ ಅಷ್ಟೇ ಎಂದಷ್ಟೇ ಹೇಳುತ್ತೇನೆ. ಅದಕ್ಕಿಂತಲೂ ವಿಶೇಷತೆಗಳೇನು ಇಲ್ಲ ಎಂದಿದ್ದಾರೆ ಭಾವನಾ. ಚಿತ್ರದಲ್ಲಿ ರಾಜೀವ್ ಗಾಂಧಿ ಅವರ ವಿಭಿನ್ನ ಮುಖಗಳು ಅನಾವರಣಗೊಳಲ್ಲಿವೆ. ರಾಜಕೀಯ ಹಾಗೂ ವೈಯಕ್ತಿಕ ಚಿತ್ರಣ ನೀಡಲಿದ್ದೇವೆ ಎಂದಿದ್ದಾರೆ.

  ಆದರೆ ಚಿತ್ರದಲ್ಲಿ ಯಾವುದೇ ವಿವಾದಾತ್ಮಕ ಅಂಶಗಳಿರುವುದಿಲ್ಲವಂತೆ. ಈಗಿನ ಜನಾಂಗ ಅವರ ಬಗ್ಗೆ ತಿಳಿಯಬೇಕಾದದ್ದು ಬಹಳಷ್ಟಿದೆ. ಅದಕ್ಕೆ ತಕ್ಕಂತೆ ಚಿತ್ರ ತೆರೆಗೆ ತರುತ್ತ್ತಿದ್ದೇವೆ. ಭಾರಿ ಬಜೆಟ್‌ನ ಚಿತ್ರ ಇದಾಗಿದ್ದು, ರಾಜೀವ್ ಗಾಂಧಿ ಪಾತ್ರಕ್ಕೆ ಬಿಗ್ ಸ್ಟಾರ್ ಒಬ್ಬರನ್ನೇ ಆಯ್ಕೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದಿದ್ದಾರೆ.(ಏಜೆನ್ಸೀಸ್)

  English summary
  Bollywood film these days seem to be drawing inspiration from real life stories. Latest is that Bhavna Talwar will soon be starting with her film based on the life of political personality Rajiv Gandhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X