»   » ವಿದ್ಯಾ ಬಾಲನ್ ಮದುವೆ: ಯಾರಿಗೆ ಅರ್ಜೆಂಟ್ ?

ವಿದ್ಯಾ ಬಾಲನ್ ಮದುವೆ: ಯಾರಿಗೆ ಅರ್ಜೆಂಟ್ ?

Posted By:
Subscribe to Filmibeat Kannada
Vidya Balan
ನಟಿ ವಿದ್ಯಾ ಬಾಲನ್ ಗೆ ಮದುವೆಗೆ ಅರ್ಜೆಂಟ್ ಏನೂ ಇಲ್ಲ. ಆದರೆ ಅವಳ ಬಾಯ್ ಫ್ರೆಂಡ್ ಕೇಳಬೇಕಲ್ಲ! ಯೂಟಿವಿ ಮೋಶನ್ ಪಿಕ್ಚರ್ಸ್ ನ ಸಿದ್ಧಾರ್ಥ್ ರಾಯ್ ಕಪೂರ್ ವಿದ್ಯಾ ಬಾಲನ್ ಬಾಯ್ ಪ್ರೆಂಡ್. ಅದ್ಯಾಕೋ ಆತ ವಿದ್ಯಾಳ ವಕ್ತಾರನನ್ನು ಮೀಡಿಯಾದಿಂದ ದೂರವಿಡುವ ಪ್ಲಾನ್ ಮಾಡುತ್ತಿದ್ದಾನಂತೆ.

ಅಂದರೆ ಸಿದ್ಧಾರ್ಥನಿಗೇನೋ ಅರ್ಜೆಂಟ್ ಮಾತಾಡುವುದು ಇರಲೇಬೇಕು. ಇನ್ನೇನಕ್ಕೆ ಅರ್ಜೆಂಟ್? ಎಲ್ಲರಿಗೂ ಬಹುಶಃ ಮದುವೆಗೇ ಇರಬಹುದೆಂಬ ಗುಮಾನಿ. ಆದರೆ ವಿದ್ಯಾ ಮಾತ್ರ ಈ ವಿಷಯವನ್ನು ಸುತಾರಾಂ ಒಪ್ಪುತ್ತಿಲ್ಲ. ಅವಳಿಗೆ ಮದುವೆಗೆ ಯಾವದೇ ಅರ್ಜೆಂಟ್ ಕಾಣಿಸುತ್ತಿಲ್ಲವಂತೆ. ಮದುವೆ ಆಗಲು ನನಗೂ ಇಷ್ಟವೇ. ಆದರೆ ತರಾತುರಿ ಯಾಕೆ? ಅಂದಿದ್ದಾರೆ ಆಕೆ.

ಅವರಿಬ್ಬರ ಸಂಬಂಧ ಹೇಗಿದೆ ಎಂದು ಕೇಳಿದಾಗ ವಿದ್ಯಾ ಕೊಟ್ಟ ಉತ್ತರ "ಸಖತ್ ಟೇಸ್ಟಿ, ಸ್ವೀಟ್, ಸ್ಪೈಸೀ ಮತ್ತು ಸಾಲ್ಟೀ".
ಅಂದರೆ ವಿದ್ಯಾ, ಮದುವೆಗೂ ಮುನ್ನ ಇರುವ ಈ ಅವಧಿಯನ್ನು ಅತ್ಯಂತ ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾಳೆ. ಅವಳಿಗೆ ಮದುವೆಯ ಬಗ್ಗೆ ಕನಸುಗಳು ಸಾಕಷ್ಟಿವೆ. ಆದರೆ ಈಗಲೇ ನನಸು ಮಾಡಿಕೊಳ್ಳುವ ಅರ್ಜೆಂಟೇನೂ ಇಲ್ಲ. (ಏಜೆನ್ಸೀಸ್)

English summary
Actress Vidya Balan would be happy to get married to her boyfriend Siddharth Roy Kapur. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada