For Quick Alerts
  ALLOW NOTIFICATIONS  
  For Daily Alerts

  ರಿಕ್ಷಾವಾಲಾ ಮಗನ ಮದುವೆಗೆ ನಟ ಅಮೀರ್ ಖಾನ್

  By Rajendra
  |

  ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ರಿಕ್ಷಾವಾಲಾ ಒಬ್ಬ ತನ್ನ ಮಗನ ಮದುವೆಗೆ ತಪ್ಪದೆ ಬರಬೇಕು ಎಂದು ಆಹ್ವಾನಿಸಿದ್ದಾನೆ. ವಾರಣಾಸಿಯಿಂದ ಮುಂಬೈಗೆ ಬಂದ 47ರ ಪ್ರಾಯದ ಲಖನ್ ಅವರು ಅಮೀರ್‌ರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಮದುವೆಗೆ ತಪ್ಪದೆ ಬರುತ್ತೇನೆ ಎಂದು ಅಮೀರ್ ಕೈಕುಲುಕಿ ಕಳುಹಿಸಿದ್ದಾರೆ.

  ಅಮೀರ್‌ಗೇನು ಲಖನ್ ದೂರದ ಸಂಬಂಧಿಯಲ್ಲ. ಎರಡು ವರ್ಷಗಳ ಹಿಂದಷ್ಟೇ ಈ ರಿಕ್ಷಾವಾಲಾ ಪರಿಚಯವಾಗಿತ್ತು. ಅಮೀರ್ ಆಗ '3 ಈಟಿಯಟ್ಸ್' ಚಿತ್ರದ ಪ್ರಚಾರದಲ್ಲಿದ್ದರು. ಯಾವುದೇ ಬಾಡಿಗಾರ್ಡ್ಸ್ ಇಲ್ಲದೆ ಉತ್ತರ ಭಾರತದಾದ್ಯಂತ ಅಮೀರ್ ಪ್ರಚಾರ ಕೈಗೊಂಡಿದ್ದರು. ಆಗ ಅಮೀರ್‌ಗೆ ಈ ಆಸಾಮಿ ಪರಿಚಯವಾಗಿ ತನ್ನ ರಿಕ್ಷಾದಲ್ಲಿ ವಾರಣಾಸಿಯನ್ನೆಲ್ಲಾ ಸುತ್ತಾಡಿಸಿ ಸುಸ್ತು ಮಾಡಿದ್ದ.

  ಮೂರು ದಿನಗಳ ಪ್ರಚಾರದಲ್ಲಿ ಲಖನ್ ಜೊತೆಗೆ ಅಮೀರ್‌ಗೆ ಆತ್ಮೀಯ ಬಂಧವೇರ್ಪಟ್ಟಿತ್ತು. ಈ ಬಂಧವೇ ರಿಕ್ಷಾವಾಲಾರನ್ನು ಮುಂಬೈತನಕ ಕರೆತಂದಿತ್ತು. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಲಖನ್‌ರನ್ನು ಪ್ರೀತಿಯಿಂದ ಬರಮಾಡಿಕೊಂಡ ಅಮೀರ್ ಮದುವೆಗೆ ಬರುವ ಭರವಸೆ ನೀಡಿದ್ದಾರೆ. (ಏಜೆನ್ಸೀಸ್)

  English summary
  Bollywood actor Aamir Khan has been invited to a rickshaw puller’s son wedding in Varanasi. The rickshaw puller came all the way from Varanasi to invite Aamir. The perfectionist was touched by his gesture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X