»   »  ಕಾಂಗ್ರೆಸ್ ಪರ ಪ್ರಚಾರಕ್ಕೆ ಶಾರುಖ್, ಪ್ರೀತಿ ಜಿಂಟಾ

ಕಾಂಗ್ರೆಸ್ ಪರ ಪ್ರಚಾರಕ್ಕೆ ಶಾರುಖ್, ಪ್ರೀತಿ ಜಿಂಟಾ

Posted By:
Subscribe to Filmibeat Kannada
Shah Rukh Khan and Preity Zinta to campaign for Congress
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿ ಮತಯಾಚಿಸಲಿದ್ದಾರೆ.ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಅಲ್ಲದೇ ನಟ ಗೋವಿಂದ ಮತ್ತು ನಟಿ ನಗ್ಮಾ ಕೂಡ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ. ಈ ಎಲ್ಲಾ ನಟ ನಟಿಯರು ಪಕ್ಷದ ಚುನಾವಣಾ ಸಭೆಯಲ್ಲಿ ಮತ್ತು ರೋಡ್ ಷೋಗಳಲ್ಲಿ ಭಾಗವಹಿಸಲಿದ್ದಾರೆ. ಐಪಿಎಲ್ ಪಂದ್ಯಾವಳಿಯ ನಡುವೆಯೂ ಶಾರುಖ್ ಮತ್ತು ಪ್ರೀತಿ ಜಿಂಟಾ ಪಕ್ಷದ ಚುನಾವಣಾ ಪ್ರಚಾರಕ್ಕೆ ಲಭ್ಯವಾಗಲಿದ್ದಾರೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.

ಪ್ರತಿಬಾರಿ ಚುನಾವಣೆಯಲ್ಲೂ ಎಲ್ಲಾ ಪಕ್ಷಗಳು ಸಿನಿಮಾ ತಾರೆಯರನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದು ವಾಡಿಕೆ. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಆದೇಶದ ನಡುವೆಯೂ, ಇಂತಹ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ಪೋಲು ಮಾಡುವ ಖರ್ಚು ಅದರಿಂದ ಆಗುವ ಲಾಭವಾದರೂ ಏನು ಎನ್ನುವುದಕ್ಕೆ ಬಹುಶಃ ಪಕ್ಷದ ನಾಯಕರುಗಳಲ್ಲೇ ಉತ್ತರವಿರುವುದಿಲ್ಲವೇನೋ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದೂ ಓದಿ
ಲೋಕಸಭೆ ಚುನಾವಣೆಗೆ ತಾರೆಗಳ ಸಮರ
ಸ್ವಮೇಕ್ ಉಳಿಸಿ, ರೀಮೇಕ್ ಅಳಿಸಿ ಆಂದೋಲನ
ಯುಗಾದಿಗೆ ಕನ್ನಡದ ಕಿರಣ್ ಬೇಡಿಯ ರಸದೌತಣ
ಬೆಂಗಳೂರಿನಲ್ಲಿ ಅರ್ಧ ಶತಕ ಬಾರಿಸಿದ ಅರುಂಧತಿ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X