»   »  ನಟಿ ಸುಸ್ಮಿತಾಸೇನ್ ಗೆ ಸಾಡೆ ಸಾತಿ ಸಮಸ್ಯೆಯಂತೆ

ನಟಿ ಸುಸ್ಮಿತಾಸೇನ್ ಗೆ ಸಾಡೆ ಸಾತಿ ಸಮಸ್ಯೆಯಂತೆ

Subscribe to Filmibeat Kannada

ಯಾಕೋ ಏನೋ ಬಾಲಿವುಡ್ ತಾರೆಗಳ ಟೈಮೇ ಸರಿಯಿಲ್ಲ! ಸಾಡೆಸಾತಿ ಸಮಸ್ಯೆ ಎದುರಾಗಿದೆ. ಶನಿಯ ವಕ್ರದೃಷ್ಟಿ, ಕಾಕ ದೃಷ್ಟಿಗಳೆಲ್ಲಾ ಒಮ್ಮೆಲೆ ನಮ್ಮ ಮೇಲೆ ಬಿದ್ದಿವೆ ಎನ್ನುತ್ತಿದ್ದಾರೆ ಬಾಲಿವುಡ್ ನಟಿ ಸುಸ್ಮಿತಾ ಸೇನ್. ಅವಕಾಶಗಳಿಗಾಗಿ ಆಕೆ ಚಾತಕ ಪಕ್ಷಿಯಂತೆ ಎದುರು ನೋಡುವಂತಾಗಿದೆ.

ಬಾಲಿವುಡ್ ನಟಿ ಸುಸ್ಮಿತಾ ಸೇನ್ ಇತ್ತೀಚೆಗೆ ಶನಿ ಪ್ರಭಾವದ ಬಗ್ಗೆ ಮಾತನಾಡುತ್ತಿದ್ದರು. ದಶಕಗಳಿಂದಲೂ ಚಿತ್ರರಂಗದಲ್ಲಿರುವ ನನಗೆ ಕಳೆದ ವರ್ಷ ಒಂದೇ ಒಂದು ಚಿತ್ರದಲ್ಲಿ ನಟಿಸುವ ಅವಕಾಶ ಬಂದಿದೆ. ಆ ಚಿತ್ರ ಸಹ ಮಾಕಾಡೆ ಮಲಗಿತು. ಇದನ್ನು ನೆನೆದರೆ ಎದೆ ಝಲ್ಲೆನ್ನುತ್ತ್ತದೆ ಎನ್ನುತ್ತಾರೆ ಸುಸ್ಮಿತಾ ಸೇನ್.

ಈ ವರ್ಷ ದುಲ್ವಾ ಮಿಲ್ ಗಯಾ, ಡು ನಾಟ್ ಡಿಸ್ಟರ್ಬ್ ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಚಿತ್ರಗಳ ಮೂಲಕವಾದರೂ ನನಗೆ ಹಿಡಿದಿರುವ ಶನಿ ಬಿಡುತ್ತದೆ ಎಂದುಕೊಂಡಿದ್ದೇನೆ. ಪ್ರತಿಯೊಬ್ಬರ ಜೀವನದಲ್ಲೂ ಏಳುಬೀಳುಗಳಿರುವುದು ಸಹಜ. ಆದರೆ ನನ್ನ ಪರಿಸ್ಥಿತಿ ತೀರಾ ಭಿನ್ನವಾಗಿದೆ ಎಂದರು.

ಒಳ್ಳೆಯ ದಿನಗಳಿಗಾಗಿ ಆಸೆಯ ಕಂಗಳಿಂದ ಎದುರು ನೋಡುತ್ತಿದ್ದೇನೆ. ಪ್ರೇಕ್ಷಕರು ನನ್ನನ್ನು ಮತ್ತೆ ನೋಡಬೇಕು ಎಂದುಕೊಂಡರೆ ನನ್ನ ಜೀವನದಲ್ಲಿ ಮತ್ತೆ ಗತ ವೈಭವ ಮರಳಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ. 33 ವರ್ಷದ ಮಾಜಿ ವಿಶ್ವಸುಂದರಿಗೆ ಈ ವರ್ಷವಾದರೂ ವೃತ್ತಿ ಬದುಕಿನಲ್ಲಿ ಕೂಡಿಬರುತ್ತದೋ ಇಲ್ಲವೋ ಎಂದು ಕಾದುನೋಡಬೇಕು ಅಷ್ಟೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada