»   »  ಪ್ರೀತಿ ಜಿಂಟಾ, ವಾಡಿಯಾ ಈಗ ಭಗ್ನ ಪ್ರೇಮಿಗಳು

ಪ್ರೀತಿ ಜಿಂಟಾ, ವಾಡಿಯಾ ಈಗ ಭಗ್ನ ಪ್ರೇಮಿಗಳು

Posted By:
Subscribe to Filmibeat Kannada

'ಗುಳಿಕೆನ್ನೆ ಚೆಲುವೆ' ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ನಡುವಿನ ಸಂಬಂಧಗಳು ಕಡಿದು ಹೋಗುವ ಲಕ್ಷಣಗಳು ಗೋಚರವಾಗಿದೆ. ದಕ್ಷಿಣಆಫ್ರಿಕಾದಲ್ಲಿ ನಡೆದ ಐಪಿಎಲ್ ಟೂರ್ನಿ ನಂತರ ಈಕೆ ಒಂಟಿಯಾಗಿದ್ದಾರೆನ್ನುವ ಸುದ್ದಿ ಜೋರಾಗಿದೆ. ಅತ್ತ ಐಪಿಎಲ್ ನಲ್ಲಿ ಈಕೆ ಒಡೆತನದ ಪಂಜಾಬ್ ಕಿಂಗ್ಸ್ ಎಲೆವೆನ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದರೆ ಇತ್ತ ಈಕೆಯ ಪ್ರಿಯಕರ ನೆಸ್ ವಾಡಿಯಾ ಕೂಡಾ ಈಕೆಯಿಂದ ದೂರ ಸರಿಯುತ್ತಿದ್ದಾರಂತೆ.

ಇದಕ್ಕೆ ಕಾರಣ ನೆಸ್ ವಾಡಿಯಾ ಪ್ರೀತಿ ಜಿಂಟಾರನ್ನು ಚಿತ್ರರಂಗದಿಂದ ದೂರ ಉಳಿದರೆ ಮಾತ್ರ ನಿನ್ನೊಂದಿಗೆ ಎಲ್ಲಾ ಸಂಬಂಧಗಳು ಮುಂದುವರಿಯುತ್ತದೆ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದಾನೆಂದು ಸುದ್ದಿ. ಇದರಿಂದ ಪ್ರೀತಿ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿ ಬಿಟ್ಟಿದ್ದಾಳಂತೆ.

ವಿಷಯ ಹೀಗಿದ್ದರೂ ಪ್ರೀತಿ ಜಿಂಟಾ ಮಾತ್ರ ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ಯಶ್ ರಾಜ್ ರ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ದಕ್ಷಿಣಾ ಆಫ್ರಿಕಾದಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುತ್ತಿದ್ದರೆ ಇಬ್ಬರೂ ಮುನಿಸಿಕೊಂಡು ದೂರ ದೂರಕ್ಕೆ ಸರಿದಿದ್ದರು. ಈಗ ಇವರಿಬ್ಬರ ಹೃದಯಗಳು ಭಾರವಾಗಿದ್ದು ನೀನೊಂದು ತೀರ ನಾನೊಂದು ತೀರ... ಎಂದು ಹಾಡುವಂತಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada