For Quick Alerts
  ALLOW NOTIFICATIONS  
  For Daily Alerts

  'DDLJ' ಚಿತ್ರಕ್ಕೆ 25ನೇ ವರ್ಷದ ಸಂಭ್ರಮ: ಹೆಸರು ಬದಲಾಯಿಸಿಕೊಂಡ ಶಾರುಖ್-ಕಾಜೋಲ್

  |

  ಭಾರತೀಯ ಸಿನಿಮಾರಂಗದಲ್ಲಿ ದಾಖಲೆ ನಿರ್ಮಿಸಿದ ಎವರ್ ಗ್ರೀನ್ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾಗೆ 25ನೇ ವರ್ಷದ ಸಂಭ್ರಮ. ಈ ಸೂಪರ್ ಸಿನಿಮಾ 25 ವರ್ಷ ಪೂರೈಸಿದ ಖುಷಿಯನ್ನು ಸಿನಿಮಾತಂಡ ಸಂಭ್ರಮಿಸುತ್ತಿದೆ. ಕಿಂಗ್ ಖಾನ್ ಖಾರುಖ್ ಖಾನ್ ಮತ್ತು ಕಾಜೋಲ್ ನಟಿಸಿರುವ ಈ ಸಿನಿಮಾ 1995 ಅಕ್ಟೋಬರ್ 20ಕ್ಕೆ ಈ ಸಿನಿಮಾ ರಿಲೀಸ್ ಆಗಿತ್ತು. DDLJ ಶಾರುಖ್ ಮತ್ತು ಕಾಜೋಲ್ ಸಿನಿಮಾ ಬದುಕಿಗೆ ದೊಡ್ಡ ತಿರುವುಕೊಟ್ಟ ಸಿನಿಮಾವಿದು.

  ಈ ಸಿನಿಮಾವನ್ನು ಭಾರತದ ಅಪ್ರತಿಮ ಪ್ರೇಮಕಥೆ ಎಂದೇ ಕರೆಯಲಾಗುತ್ತಿದೆ. ಚಿತ್ರದಲ್ಲಿ ರಾಜ್ ಮಲ್ಹೋತ್ರ ಮತ್ತು ಸಿಮ್ರಾನ್ ಪಾತ್ರದಲ್ಲಿ ಶಾರುಖ್ ಮತ್ತು ಕಾಜೋಲ್ ಮಿಂಚಿದ್ದಾರೆ. ಇದೀಗ 25ನೇ ವರ್ಷದ ಸಂಭ್ರಮದಲ್ಲಿ ಶಾರುಖ್ ಮತ್ತು ಕಾಜೋಲ್ ಇಬ್ಬರು ಹೆಸರು ಬದಲಾಯಿಸಿಕೊಂಡಿದ್ದಾರೆ. ಮುಂದೆ ಓದಿ..

  'DDLJ' ಚಿತ್ರಕ್ಕೆ 25ನೇ ವರ್ಷದ ಸಂಭ್ರಮ: ಲಂಡನ್ ನಲ್ಲಿ ಶಾರುಖ್-ಕಾಜೋಲ್ ಪ್ರತಿಮೆ ಅನಾವರಣ'DDLJ' ಚಿತ್ರಕ್ಕೆ 25ನೇ ವರ್ಷದ ಸಂಭ್ರಮ: ಲಂಡನ್ ನಲ್ಲಿ ಶಾರುಖ್-ಕಾಜೋಲ್ ಪ್ರತಿಮೆ ಅನಾವರಣ

  ರಾಜ್ ಮಲ್ಹೋತ್ರ ಈಗ ಶಾರುಖ್ ಖಾನ್

  ರಾಜ್ ಮಲ್ಹೋತ್ರ ಈಗ ಶಾರುಖ್ ಖಾನ್

  DDL ಸಿನಿಮಾ 25 ವರ್ಷಗಳನ್ನು ಪೂರೈಸಿದ ಖುಷಿಯಲ್ಲಿ ಶಾರುಖ್ ಖಾನ್, ರಾಜ್ ಮಲ್ಹೋತ್ರ ಎಂದು ಹೆಸರು ಬದಲಾಯಿಸಿದ್ದಾರೆ. DDLJ ಸಿನಿಮಾದಲ್ಲಿ ಶಾರುಖ್ ನಟಿಸಿದ್ದ ಪಾತ್ರವಿದು. ಟ್ವಿಟ್ಟರ್ ನಲ್ಲಿ ಇದೇ ಹೆಸರನ್ನು ಬಳಸಿದ್ದಾರೆ, 'ರಾಜ್ ಮತ್ತು ಸಿಮ್ರಾನ್ ಅವರನ್ನು ನಿಮ್ಮ ಪೂರ್ಣ ಹೃದಯದಿಂದ ಪ್ರೀತಿಸಿದ್ದಕ್ಕಾಗಿ ಕೃತಜ್ಞತೆಗಳು. ಈ ಸಿನಿಮಾ ಯಾವಾಗಲು ವಿಶೇಷವೆನಿಸುತ್ತದೆ.' ಎಂದು ಬರೆದುಕೊಂಡಿದ್ದಾರೆ.

  ಸಿಮ್ರಾನ್ ಆದ ಕಾಜೋಲ್

  ಸಿಮ್ರಾನ್ ಆದ ಕಾಜೋಲ್

  ಶಾರುಖ್ ಹೆಸರು ಬದಲಾಯಿಸಿಕೊಳ್ಳುತ್ತಿದ್ದಂತೆ ನಟಿ ಕಾಜೋಲ್ ಸಹ ಹೆಸರು ಬದಲಾಯಿಸಿಕೊಂಡಿದ್ದಾರೆ. 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾದಲ್ಲಿ ಸಿಮ್ರಾನ್ ಆಗಿ ಮಿಂಚಿದ್ದ ಕಾಜೋಲ್ ಅದೇ ಹೆಸರನ್ನು ಇಟ್ಟುಕೊಂಡಿದ್ದಾರೆ. ಹೌದು ಟ್ವಿಟ್ಟರ್ ನಲ್ಲಿ ಸಿಮ್ರಾನ್ ಎಂದು ಹೆಸರು ಬದಲಾಯಿಸಿ, 'ರಾಜ್ ಮತ್ತು ಸಿಮ್ರಾನ್ ಇಬ್ಬರು, ಒಂದು ಸಿನಿಮಾ, 25 ವರ್ಷಗಳು ಮತ್ತು ಪ್ರೀತಿ ಇನ್ನೂ ಕಮ್ಮಿ ಆಗಿಲ್ಲ.' ಎಂದಿದ್ದಾರೆ. ಈ ವಿಶೇಷ ದಿನವನ್ನು ಮಾಡಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞನಾಗಿದ್ದೇನೆ. ಒಂದು ವಿದ್ಯಮಾನ ಮತ್ತು ತನ್ನದೆ ಆದ ಇತಿಹಾಸದ ಒಂದು ಭಾಗ.' ಎಂದು ಟ್ವಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

  'DDLJ' ಚಿತ್ರಕ್ಕೆ 25ನೇ ವರ್ಷದ ಸಂಭ್ರಮ: ರೀ ರಿಲೀಸ್ ಆಗುತ್ತಿದೆ ಶಾರುಖ್-ಕಾಜೋಲ್ ಸಿನಿಮಾ'DDLJ' ಚಿತ್ರಕ್ಕೆ 25ನೇ ವರ್ಷದ ಸಂಭ್ರಮ: ರೀ ರಿಲೀಸ್ ಆಗುತ್ತಿದೆ ಶಾರುಖ್-ಕಾಜೋಲ್ ಸಿನಿಮಾ

  ಲಂಡನ್ ನಲ್ಲಿ ಕಂಚಿನ ಪ್ರತಿಮೆ ಅನಾವರಣ

  ಲಂಡನ್ ನಲ್ಲಿ ಕಂಚಿನ ಪ್ರತಿಮೆ ಅನಾವರಣ

  DDLJ ಸಿನಿಮಾದ 25ನೇ ವರ್ಷದ ಸಂಭ್ರಮದ ಸಮಯದಲ್ಲಿ, ಲಂಡನ್ ನ ಪ್ರಸಿದ್ಧ ಸಿನಿಮಾ ಪ್ರತಿಮೆಗಳ ಹೃದಯಭಾಗ ಲೀಸೆಸ್ಟರ್ ಸ್ಕೈರ್ ನಲ್ಲಿರವ 'ಸೀನ್ಸ್ ಇನ್ ದಿ ಸ್ಕೈರ್' ನಲ್ಲಿ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾದ ಶಾರುಖ್ ಖಾನ್ ಮತ್ತು ಕಾಜೋಲ್ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ. ಇದು 25ನೇ ವರ್ಷದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಅಲ್ಲಿ ವಿಶ್ವದ ಪ್ರಸಿದ್ಧ ಸಿನಿಮಾಗಳ ಸಾಕಷ್ಟು ಪ್ರತಿಮೆಗಳಿವೆ. ಅವುಗಳಲ್ಲಿ ಈಗ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾದ ಪ್ರತಿಮೆ ಕೂಡ ಒಂದು.

  ಸ್ಪೇನ್ ನಲ್ಲಿ ರೀ ರಿಲೀಸ್ ಆಗುತ್ತಿದೆ DDLJ

  ಸ್ಪೇನ್ ನಲ್ಲಿ ರೀ ರಿಲೀಸ್ ಆಗುತ್ತಿದೆ DDLJ

  'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾ ರೀ ರಿಲೀಸ್ ಆಗುತ್ತಿದೆ. ಆದರೆ ಭಾರತದಲ್ಲಿ ಅಲ್ಲ. ಬದಲಿಕೆ ಸ್ಪೇನ್ ನಲ್ಲಿ ರೀ ರಿಲೀಸ್ ಆಗುತ್ತಿದೆ. ಮನಿ ಹೀಸ್ಟ್ ಸಿನಿಮಾದ ನಾಯಕ ಅಜಯ್ ಜೇಥಿ ಈ ಸಿನಿಮಾವನ್ನು ಸ್ಪೇನ್ ನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ. ಅಜಯ್ ನಟನಾಗಿ ಮಾತ್ರವಲ್ಲದೆ ಬಾಲಿವುಡ್ ಸಿನಿಮಾಗಳ ವಿತರಕರಾಗಿಯೂ ಗುರುತಿಸಿಕೊಂಡಿದ್ದಾರೆ.

  20 ವರ್ಷ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿದ ಸಿನಿಮಾ

  20 ವರ್ಷ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿದ ಸಿನಿಮಾ

  ಅಂದ್ಹಾಗೆ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾ 1995ರಿಂದ ಸತತ 20 ವರ್ಷಗಳ ಕಾಲ ಮುಂಬೈನ ಮರಾಠ ಮಂದಿರ್ ನಲ್ಲಿ ಪ್ರಸಾರವಾಗುತ್ತಿತ್ತು. 2015ರಿಂದ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ. ಕೊನೆಯ ಪ್ರದರ್ಶನದ ವೇಳೆ 210 ಪ್ರೇಕ್ಷಕರಿದ್ದರು. ಭಾರತೀಯರು ಮಾತ್ರವಲ್ಲದೆ ವಿದೇಶದಿಂದನೂ ಜನ ಬಂದು ಈ ಸಿನಿಮಾ ವೀಕ್ಷಿಸುತ್ತಿದ್ದರಂತೆ. ಕ್ರಮೇಣ ಪ್ರೇಕ್ಷಕರ ಸಂಖ್ಯೆ ಕಡಿಮೆಯಾದ ಕಾರಣ ಸಿನಿಮಾ ಪ್ರದರ್ಶನ ನಿಲ್ಲಿಸಿದ್ದಾರೆ. ಭಾರತೀಯ ಸಿನಿಮಾರಂಗದಲ್ಲೇ ಸತತ 20 ವರ್ಷ ಪ್ರದರ್ಶನ ಕಂಡ ಏಕೈಕ ಸಿನಿಮಾ ಎಂಬ ದಾಖಲೆ ನಿರ್ಮಿಸಿದೆ.

  English summary
  25 Years of DDLJ: Shah Rukh Khan changes his name on Twitter to Raj Malhotra.
  Tuesday, October 20, 2020, 14:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X