ಮುಂಬೈ ಏರ್‌ಪೋರ್ಟ್‌ನಲ್ಲಿ ಬಿಪಾಶಾ ಬಸು ಬಂಧನ
ಬಾಲಿವುಡ್ ತಾರೆ ಬಿಪಾಶಾ ಬಸು ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಗುರುವಾರ (ಮೇ.26) ಮುಂಬೈ ಏರ್‌ಪೋರ್ಟ್‌ನಲ್ಲಿ ಬಂಧಿಸಿದ್ದಾರೆ. ಬಿಪಾಶಾ ಲಂಡನ್‌ನಿಂದ ಮುಂಬೈಗೆ ವಾಪಸಾಗುತ್ತ್ತಿದ್ದರು. ಈಕೆಯ ಬ್ಯಾಗಿನಲ್ಲಿ ತೆರಿಗೆ ಪಾವತಿಸದ ಆಭರಣಗಳು ದೊರೆತ ಕಾರಣ ಕಸ್ಟಮ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾಗಿ ಮೂಲಗಳು ತಿಳಿಸಿವೆ.
ಮುಂಬೈ ಏರ್‌ಪೋರ್ಟ್‌ನಲ್ಲಿ ಬಿಪಾಶಾ ಗ್ರೀನ್ ಚಾನಲ್ ಬಳಿ ಹಾದುಹೋಗಬೇಕಾದರೆ ಕಸ್ಟಮ್ ಅಧಿಕಾರಿಗಳು ಆಕೆಯನ್ನು ತಡೆದರು. ತೆರಿಗೆ ಪಾವತಿಸಿದ ಬಳಿಕ ಬಿಪಶಾರನ್ನು ಬಿಡುಗಡೆ ಮಾಡಲಾಯಿತು. ಮುಂಬೈ ಏರ್‌ಪೋರ್ಟ್‌ನಲ್ಲಿ ಸಿನಿಮಾ ತಾರೆಗಳು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಈ ತಿಂಗಳಲ್ಲಿ ಸಿಕ್ಕಿಬೀಳುತ್ತಿರುವ ಎರಡನೆ ಘಟನೆ ಇದಾಗಿದೆ.
ಈ ಹಿಂದೆ ಮುಂಬೈ ಸಹರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿನಿಷಾ ಲಾಂಬಾ, ಕಸ್ಟಮ್ ಅಧಿಕಾರಿಗಳಿಗೆ ರು.50 ಲಕ್ಷ ವಜ್ರಾಭರಣಗಳ ಸಮೇತ ಸಿಕ್ಕಿಬಿದ್ದಿದ್ದರು. ಬಳಿಕ ಕಸ್ಟಮ್ಸ್ ಅಧಿಕಾರಿಗಳು ಮಿನಿಷಾರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. (ಏಜೆನ್ಸೀಸ್)
More from Filmibeat
English summary
Bollywood actress Bipasha Basu has been detained at Mumbai airport by customs officials on Thursday. Bipasha was carrying undeclared jewellery. The Bollywood beauty was returning from London to Mumbai.
ಬಿಪಾಶಾ ಬಸು ತೆರಿಗೆ ಬಾಲಿವುಡ್ ಬಂಧನ ಮುಂಬೈ ಜಾನ್ ಅಬ್ರಹಾಂ bipasha basu customs bollywood arrest john abraham


Click it and Unblock the Notifications











