»   » ರೆಹಮಾನ್ ಗೆ ಆಲಿಗರ್ ಮುಸ್ಲಿಂ ವಿವಿ ಡಾಕ್ಟರೇಟ್

ರೆಹಮಾನ್ ಗೆ ಆಲಿಗರ್ ಮುಸ್ಲಿಂ ವಿವಿ ಡಾಕ್ಟರೇಟ್

Posted By: Staff
Subscribe to Filmibeat Kannada
Chennai welcomes Oscar hero AR Rahman
ಸ್ಲಂಡಾಗ್ ಮಿಲಿಯನೇರ್ ಚಿತ್ರದ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಚೆನ್ನೈಗೆ ಆಗಮಿಸಿದರು. ಆಸ್ಕರ್ ವಿಜೇತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ರೆಹಮಾನ್ ರನ್ನು ಅವರ ಅಭಿಮಾನಿಗಳು ಮತ್ತು ಗೆಳೆಯರು ಅಭೂತಪೂರ್ವ ಸ್ವಾಗತ ಕೋರುವ ಮೂಲಕ ಬರಮಾಡಿಕೊಂಡರು.

ದುಬೈ ಮೂಲಕ ಅವರು ತಮ್ಮ ಹುಟ್ಟೂರು ಚೆನ್ನೈಗೆ ಗುರುವಾರ ಮುಂಜಾನೆ 2.30ಕ್ಕೆ ಆಗಮಿಸಿದರು. ರೆಹಮಾನ್ ಅವರಿಗೆ ಇಂಡಿಯನ್ ಏರ್ ಲೈನ್ಸ್ ಆದರದ ಸ್ವಾಗತ ಕೋರಿತು. ರೆಹಮಾನ ಮಾತನಾಡುತ್ತಾ, ಇದು ಆರಂಭ ಮಾತ್ರ. ಇನ್ನೂ ಸಾಧಿಸುವುದು ಬಹಳಷ್ಟಿದೆ. ಖುಷಿಯಾಗಿ ಮನೆಗೆ ಹಿಂತಿರುಗುತ್ತಿದ್ದೇನೆ.ನಿಮ್ಮೆಲ್ಲರ ಅಭಿಮಾನಕ್ಕೆ ನಾವು ಚಿರಋಣಿಯಾಗಿದ್ದೇನೆ ಎಂದರು.

ಅಲಿಗರ್ ಮುಸ್ಲಿಂ ವಿವಿಯ ಗೌರವ ಡಾಕ್ಟರೇಟ್
ಲಕ್ನೊ ದ ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯ ಸಂಗೀತ ಮಾಂತ್ರಿಕನಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ. ಈ ಸಂಬಂಧ ವಿಶ್ವವಿದ್ಯಾಲಯ ಅಧಿಕಾರಿಯೊಬ್ಬರು ಮಾತನಾಡುತ್ತಾ, ರೆಹಮಾನ್ ರ ಆಸ್ಕರ್ ಗೆಲುವನ್ನು ಗೌರವ ಡಾಕ್ಟರೇಟ್ ನೀಡುವ ಮೂಲಕ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದೇವೆ. ಮಾರ್ಚ್ 25ರಂದು ನಡೆಯುವ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದರು.

ರೆಹಮಾನ್ ಜತೆಗೆ ಟಾಟಾ ಗ್ರೂಪ್ ನ ಅಧ್ಯಕ್ಷ ರತನ್ ಟಾಟಾ, ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್.ಸ್ವಾಮಿನಾಥನ್ ಹಾಗೂ ಉರ್ದು ಸಾಹಿತಿ ಪ್ರೊ.ಗೋಪಿಚಂದ್ ನಾರಂಗ್ ಅವರಿಗೂ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

(ಏಜೆನ್ಸೀಸ್)
ಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ ಗೆ 8 ಆಸ್ಕರ್
ಪೂಕುಟ್ಟಿ ಪಡೆದ ಆಸ್ಕರ್ ದೇಶಕ್ಕೆ ಅರ್ಪಣೆ
ಆಸ್ಕರ್ 2009 ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada