»   » ಕಾಮಸೂತ್ರ ಸೂಪರ್ ಮಾಡೆಲ್ ಆತ್ಮಹತ್ಯೆಗೆ ಶರಣು

ಕಾಮಸೂತ್ರ ಸೂಪರ್ ಮಾಡೆಲ್ ಆತ್ಮಹತ್ಯೆಗೆ ಶರಣು

Posted By:
Subscribe to Filmibeat Kannada

ಕಾಮಸೂತ್ರ ಸೂಪರ್ ಮಾಡೆಲ್ ವಿವೇಕಾ ಬಾಬಾಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಂದ್ರಾದಲ್ಲಿನ ಆಕೆಯ ನಿವಾಸದಲ್ಲಿ ಶುಕ್ರವಾರ (ಜು.25) ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿವೇಕಾ ಸಂಬಂಧಿಕರು ತಿಳಿಸಿದ್ದಾರೆ. ಪ್ರಿಯಕರನೊಂದಿಗಿನ ಪ್ರೇಮ ವಿಫಲವಾಗಿರುವುದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ಮಾರಿಷಷ್ ನಲ್ಲಿ ಹುಟ್ಟಿದ ವಿವೇಕಾ 1994ರಲ್ಲಿ ಕಾಂಡೋಮ್ ಕಂಪನಿ ಕಾಮಸೂತ್ರ ಜಾಹೀರಾತಿನಲ್ಲಿ ಅಭಿನಯಿಸುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಮಾಜಿ ಮಾರಿಷಷ್ ಸುಂದರಿ ವಿವೇಕಾ ಅವರು ತಮ್ಮ ನಿವಾಸದಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸ್ ಮೂಲಗಳು ಖಚಿತಪಡಿಸಿವೆ.

ವಿವೇಕಾ ಅವರ ಮನೆಯಿಂದ ಅಡುಗೆ ಅನಿಲ ಸೋರಿಕೆಯ ವಾಸನೆ ಬರುತ್ತಿದ್ದ ಕಾರಣ ನೆರೆಯವರು ಬಂದು ಬಾಗಿಲು ತಟ್ಟಿದ್ದಾರೆ. ಯಾವುದೇ ಪ್ರತಿಕ್ರಿಯೆ ಬರದ ಕಾರಣ ಕೂಡಲೆ ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮೇಲ್ಮೋಟಕ್ಕೆ ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದು ಶವ ಪರೀಕ್ಷೆ ವರದಿಗಾಗಿ ಎದುರು ನೋಡುತ್ತಿದ್ದಾರೆ.

ವಿವೇಕಾ ಅವರ ಮನೆಯಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಬರಹಗಳು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಾಮಸೂತ್ರ ಕಾಂಡೋಮ್ ಸೇರಿದಂತೆ ಲೈವ್ ಇನ್ ಜೀನ್ಸ್ ಜಾಹೀರಾತಿನಲ್ಲೂ ವಿವೇಕಾ ಅಭಿನಯಿಸಿದ್ದರು. 'ಯೇ ಕೈಸಿ ಮೊಹಬ್ಬತ್' ಸೇರಿದಂತೆ ಕೆಲವು ಬಾಲಿವುಡ್ ಚಿತ್ರಗಳಲ್ಲೂ ಆಕೆ ನಟಿಸಿದ್ದಾರೆ. ತೊಂಬತ್ತರ ದಶಕದಲ್ಲಿ ಮಾರಿಷಷ್ ನಿಂದ ಮುಂಬೈನ ಬಾಂದ್ರಾಗೆ ಸ್ಥಳಾಂತರವಾಗಿದ್ದರು. ತನ್ನ ಗೆಳೆಯನೊಂದಿಗಿನ ಪ್ರೇಮ ಭಗ್ನವಾದ ಬಳಿಕ ಆಕೆ ಒಂಟಿಯಾಗಿ ಜೀವಿಸುತ್ತಿದ್ದರು.

Please Wait while comments are loading...