»   »  ಎಂಟು ವರ್ಷಗಳ ಬಳಿಕ ಮತ್ತೆ ಶಾರುಖ್, ಕರೀನಾ

ಎಂಟು ವರ್ಷಗಳ ಬಳಿಕ ಮತ್ತೆ ಶಾರುಖ್, ಕರೀನಾ

Subscribe to Filmibeat Kannada

ಎಂಟು ವರ್ಷಗಳ ಹಿಂದೆ 'ಅಶೋಕ' ಎಂಬ ಹಿಂದಿ ಚಿತ್ರದಲ್ಲಿ ಶಾರುಖ್ ಖಾನ್, ಕರೀನಾ ಕಪೂರ್ ಜತೆಯಾಗಿ ನಟಿಸಿದ್ದರು. ಆದರೆ ಆ ಚಿತ್ರ ಬಾಕ್ಸಾಪೀಸ್ ನಲ್ಲಿ ಮಕಾಡೆ ಮಲಗಿದ್ದು ಬೇರೆ ಮಾತು. ಆ ಬಳಿಕ ಇವರಿಬ್ಬರೂ ಒಂದೇ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಜತೆಯಾಗಿ ನಟಿಸಿರಲಿಲ್ಲ.

ಕಭಿ ಖುಷಿ ಕಭಿ ಘಮ್, ಡಾನ್ ಮತ್ತು ಬಿಲ್ಲೂ ಚಿತ್ರಗಳಲ್ಲಿ ಶಾರುಖ್ ಖಾನ್, ಕರೀನಾ ಕಪೂರ್ ಕಾಣಿಸಿಕೊಂಡಿದ್ದರು. ಇದೀಗ ಇಬರಿಬ್ಬರೂ 'ರಾ1' ಎಂಬ ಚಿತ್ರದಲ್ಲಿ ಜತೆಯಾಗಿ ನಟಿಸಲು ಸಿದ್ಧರಾಗುತ್ತಿರುವುದಾಗಿ ಬಾಲಿವುಡ್ ಮೂಲಗಳು ತಿಳಿಸಿವೆ.

ಈ ಚಿತ್ರವನ್ನು ಶಾರುಖ್ ಖಾನ್ ಅವರ ಸ್ವಂತ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ನಿರ್ಮಿಸಲಿದೆ. ಈ ಚಿತ್ರಕ್ಕೆ ಮೊದಲು ಪ್ರಿಯಾಂಕ ಚೋಪ್ರಾ ನಾಯಕಿ ಎಂದುಕೊಂಡಿದ್ದರು. ಆದರೆ ಇದೀಗ ಶಾರುಖ್ ತಮ್ಮ ಮನಸ್ಸನ್ನು ದಿಢೀರ್ ಬದಲಾಯಿಸಿದ್ದು ಆಕೆಯ ಸ್ಥಾನಕ್ಕೆ ಕರೀನಾ ಅವರನ್ನು ಆಯ್ಕೆ ಮಾಡಿದ್ದಾರಂತೆ.

ಸೂಪರ್ ಹೀರೋ ಪಾತ್ರದಲ್ಲಿ ಶಾರುಖ್ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಇತ್ತೀಚೆಗೆ 'ಕ್ಯಾಷ್'ಎಂಬ ತೋಪು ಚಿತ್ರ ಕೊಟ್ಟ ಅನುಭವ್ ಸಿನ್ಹಾ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಕರೀನಾ ಕಪೂರ್ ಈ ಚಿತ್ರದಲ್ಲಿ ನಟಿಸುವ ವಿಷಯ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada