ವಿದ್ಯಾಬಾಲನ್ ನಟನೆಯ ಹಿಂದಿ ಚಿತ್ರ ಇಷ್ಕಿಯಾ

ಅರ್ಷದ್ ವಾರ್ಸಿ, ವಿದ್ಯಾಬಾಲನ್ ಜೊತೆಯಾಗಿ ನಟಿಸಿರುವ ಚಿತ್ರ.ನಾಸಿರುದ್ದೀನ್ ಷಾ ಪ್ರಧಾನ ಪಾತ್ರಧಾರಿ. ಕಳ್ಳತನಗಳ ಸುತ್ತಲೂ ಹೆಣೆದುಕೊಂಡ ಚಿತ್ರವಿದು. ನಾಸಿರುದ್ದೀನ್, ಅರ್ಷದ್ ಕಳ್ಳರ ಪಾತ್ರದಲ್ಲಿ ನಟಿಸಿದ್ದಾರೆ. ವಿದ್ಯಾಬಾಲನ್ ರೊಂದಿಗಿನ ಅವರ ಸಂಬಂಧ ಏನು ಎಂಬುದು ಸದ್ಯಕ್ಕೆ ಸಸ್ಪೆನ್ಸ್.
ಈ ಚಿತ್ರ ಬಹುತೇಕ ಮಹರಾಷ್ಟ್ರದಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರದ ಮುಖ್ಯ ಸನ್ನಿವೇಶಗಳನ್ನು ಉತ್ತರ ಪ್ರದೇಶದಲ್ಲೂ ಚಿತ್ರೀಕರಿಸಲಾಗಿದೆ. ಚಿತ್ರೀಕರಣ ಮುಕ್ತಾಯವಾಗಿದ್ದು ನಿರ್ಮಾಣ ನಂತರದ ಚಟುವಟಿಕೆಗಳಲ್ಲಿದೆ. ಇಷ್ಕಿಯಾ ಚಿತ್ರ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರದಲ್ಲಿ ವಿದ್ಯಾಬಾಲನ್, ಅರ್ಷದ್ ನಡುವಿನ ಗುಸುಗುಸು ಸುದ್ದಿಗಳ ನಡುವೆ ಚಿತ್ರ ಬಿಡುಗಡೆಯಾಗುತ್ತಿರುವುದು ಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹ ಮೂಡಿಸಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಬಾಲಿವುಡ್ bollywood ಇಷ್ಕಿಯಾ ವಿದ್ಯಾಬಾಲನ್ ಅರ್ಷದ್ ಅಭಿಷೇಕ್ ಚೌಬೆ ishqiya vidyabalan arshad liplock abhishek chaubey


Click it and Unblock the Notifications