For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ಜೊತೆ ರಾಮ್ ಚರಣ್ ತೇಜ

  By Rajendra
  |

  ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಜೊತೆ ನಟಿಸಲು ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ತುದಿಗಾಲಲ್ಲಿ ನಿಂತಿದ್ದಾರೆ. ಅಮಿತಾಬ್ ಬಚ್ಚನ್ ಅಭಿನಯದ ಅಪೂರ್ವ ಚಿತ್ರ 'ಝಂಜೀರ್' (1973) ರೀಮೇಕ್ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ನಾಯಕ ನಟ ರಾಮ್ ಚರಣ್ ತೇಜ.

  ಏಪ್ರಿಲ್‌ ಮಧ್ಯಂತರದಲ್ಲಿ ಸೆಟ್ಟೇರಲಿರುವ ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ. ಈ ಹಿಂದೆ ಈ ಚಿತ್ರಕ್ಕೆ ನಾಯಕಿ ದೀಪಿಕಾ ಪಡುಕೋಣೆ ಎಂಬ ಸುದ್ದಿಯಿತ್ತು. ಕಡೆಗೆ ಚಿರು ಪುತ್ರನ ಜೊತೆ ಅಭಿನಯಿಸುವ ಚಾನ್ಸ್ ಪ್ರಿಯಾಂಕಾ ಚೋಪ್ರಾ ಪಾಲಾಗಿದೆ. ಇನ್ನು ಅಧಿಕೃತವಾಗಿ ಸುದ್ದಿ ಹೊರಬೀಳಬೇಕಾಗಿದೆ ಅಷ್ಟೇ.

  'ಶೂಟೌಟ್ ಅಟ್ ಲೋಖಾಂಡವಾಲಾ' ಚಿತ್ರ ನಿರ್ದೇಶಿಸಿದ್ದ ಅಪೂರ್ವ ಲಖಿಯಾ ಆಕ್ಷನ್ ಕಟ್‌ನಲ್ಲಿ ಚಿತ್ರ ಮೂಡಿಬರಲಿದೆ. ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೊಂದಿಗೆ ಜಂಟಿಯಾಗಿ ಅಮಿತ್ ಮೆಹ್ರಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ರಾಮ್ ಚರಣ್ ತೇಜಾಗೆ ರು.11 ಕೋಟಿ ಸಂಭಾವನೆ ನೀಡಲಾಗಿದೆಯಂತೆ. (ಏಜೆನ್ಸೀಸ್)

  English summary
  Chiranjeevi son Ram Charan's hindi film Zanzeer is all set to hit the floors in the middle of April. Now the latest buzz is that Bollywood actress Priyanka Chopra has been roped to play the female lead role opposite Charan in Zanzeer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X