For Quick Alerts
  ALLOW NOTIFICATIONS  
  For Daily Alerts

  ದಗ್ಗುಬಾಟಿ ರಾಣಾ-ಬಿಪಾಶಾ ಡೇಟಿಂಗ್, ಡೇಟಿಂಗ್...

  By Srinath
  |

  ತೆಲುಗು ಹೀರೊ ರಾಣಾ ದಗ್ಗುಬಾಟಿ 'ದಮ್ ಮಾರೊ ದಮ್' ಸಿನಿಮಾದ ಮೂಲಕ ಬಾಲಿವುಡ್-ಗೆ ಎಂಟ್ರಿ ಕೊಟ್ಟಾಗಿದೆ. ಈ ಮಧ್ಯೆ ಏನಾಗಿದೆಯೆಂದರೆ ಚಿತ್ರದ ನಾಯಕಿ ಬಾಲುವುಡ್-ನ ಸೆಕ್ಸಿ ರಾಣಿ ಬಿಪಾಶಾ ಬಸು ಎಂಬ ಬೆಂಗಾಲಿ ಬೆಡಗಿ ಪ್ರೇಮ ಪಾಶದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಗುಪ್ತ ಮೂಲಗಳು ಪಿಸುಗುಟ್ಟತೊಡಗಿವೆ. ಆದ್ರೆ, ನಮ್ಮ ದಕ್ಷಿಣ ಭಾರತದ ಸುರಸುಂದರಾಂಗ ರಾಣಾ ಮಾತ್ರ ಅಂಥದ್ದೇನೂ ನಡೆಯುತ್ತಿಲ್ಲ ಎಂದು ಸಾರಾಸಗಟಾಗಿ ಒಗಾಯಿಸಿದ್ದಾನೆ. ಏನೇ ಆಗ್ಲಿ ಬೆಂಕಿಯಿಲ್ಲದೆ ಹೊಗೆ ಏಳದು ಅಲ್ವೆ!?

  ನನಗೆ ಬಿಪಾಶಾ ಅಂದ್ರೆ ಶ್ಯಾನೆ ಗೌರವ ಉಕ್ಕುತ್ತದೆ. ಅಂಥಾ ಬೆಡಗಿಯೊಂದಿಗೆ ನನ್ನ ಹೆಸರನ್ನು ತಳುಕು ಹಾಕಿರುವುದಕ್ಕೆ ಶ್ಯಾನೆ ಮುಜುಗುರವಾಗುತ್ತಿದೆ. ಮತ್ತೆ ಮತ್ತೆ ಇಂಥಾ ಗಾಳಿಸುದ್ದಿ ಎಲ್ಲಿಂದ ಹಾರಿಬರುತ್ತದೋ ತೆಲುಗು ತಾಯಿಗೇ ಗೊತ್ತು ಎಂದು ಈ ಅಪ್ಪಟ ತೆಲುಗು ಬಿಡ್ಡ ದಗ್ಗುಬಾಟಿ ಸಣ್ಣಗೆ ಕೆಮ್ಮಿದ್ದಾನೆ. ಅದೂ ತನ್ನ ಟ್ವಿಟ್ಟರ್-ನಲ್ಲಿ. ಅಂದಹಾಗೆ, ದಗ್ಗುಬಾಟಿ-ಬಿಪಾಶಾ ಜೋಡಿಯನ್ನು ಏಪ್ರಿಲ್ 22ರಂದು ಬಿಡುಗಡೆಯಾಗಲಿರುವ 'ದಮ್ ಮಾರೊ ದಮ್' ಚಿತ್ರದಲ್ಲಿ ಪರದೆಯ ತುಂಬಾ ನೋಡಿ ಆನಂದಿಸಿ.

  25 ಈ ನೀಳಕಾಯದ ಸುಂದರ 5 ವರ್ಷಗಳಿಂದ ಶ್ರಿಯಾ ಶರಣ್ ಜತೆ ಡೇಟಿಂಗ್ ಇಟ್ಟುಕೊಂಡಿದ್ದಾನೆ. ಬಾಲಿವುಡ್ ಕೃಷ್ಣ ಸುಂದರಿ ಬಿಪಾಶಾಳಿಂದಾಗಿ ಅವರಿಬ್ಬರ ಮಧ್ಯೆ ಸುನಾಮಿ ಅಪ್ಪಳಿಸಿದೆ ಎನ್ನುತ್ತದೆ ಟಾಲಿವುಡ್ ಮೂಲಗಳು. ಇದಕ್ಕೂ ಪ್ರತಿಕ್ರಿಯಿಸಿರುವ ದಗ್ಗುಬಾಟಿ, ಅಯ್ಯೊ ಶೂಟಿಂಗ್ ಅದೂ ಇದೂ ಅಂತ ಹತ್ತಿರವಾಗಿರುತ್ತೇವೆ. ಅಷ್ಟಕ್ಕೇ ಕತೆ ಕಟ್ಟಿಬಿಡೋದಾ, ಛೆ? ಎಂದೆಲ್ಲ ನಾಚಿಕೊಳ್ಳುತ್ತಾನೆ. ನಾನು ಅವಳು (ಶ್ರಿಯಾ) ಒಂದೇ ಕಾಲೇಜಿನಲ್ಲಿ ಅದೆಂಥದ್ದೋ ಕೊ-ಎಜುಕೇಶನ್ ಅಂತ ಮಾಡಿದ್ದೀವಿ. 8 ವರ್ಷಗಳಿಂದ ಪರಸ್ಪರ ಬಲ್ಲೆವು. ಅಂಥಾದ್ದರಲ್ಲಿ ನಿಮ್ಮದೇನು ಖ್ಯಾತೆ ಎಂದು ಗುರುಗುಟ್ಟಿದ್ದಾನೆ.

  English summary
  Southern actor Rana Daggubati, who is set to make his Bollywood debut in Dum Maaro Dum, has squashed rumours of a relationship with co-star Bipasha Basu

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X