For Quick Alerts
  ALLOW NOTIFICATIONS  
  For Daily Alerts

  ವಿದ್ಯಾ ಬಾಲನ್‌ರನ್ನು ಮದುವೆಯಾಗ್ತಾನಂತೆ ಶಾರುಖ್

  By Rajendra
  |

  ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಬಹಳ ದಿನಗಳಿಂದ ತಮ್ಮ ಮನಸ್ಸಿನಲ್ಲೇ ಬಚ್ಚಿಟ್ಟುಕೊಂಡಿದ್ದ ಆಸೆಯನ್ನು ಕಡೆಗೂ ಹೊರಹಾಕಿದ್ದಾರೆ. 'ಡರ್ಟಿ' ಕ್ವೀನ್ ವಿದ್ಯಾ ಬಾಲನ್‌ರನ್ನು ಮದುವೆಯಾಗುವ ಆಸೆಯನ್ನು ಶಾರುಖ್ ವ್ಯಕ್ತಡಿಸಿದ್ದಾರೆ. ಒಂಥರಾ ತಮಾಷೆ ಹಾಗೂ ಸೀರಿಯಸ್ ಸುದ್ದಿ ಇದು ಓದಿ ನೋಡಿ.

  'ದಿ ಡರ್ಟಿ ಪಿಕ್ಚರ್' ಚಿತ್ರದಲ್ಲಿನ ವಿದ್ಯಾ ಬಾಲನ್ ಅಭಿನಯ ಚಾತುರ್ಯವನ್ನು ಚಿತ್ರದ ನಿರ್ದೇಶಕಿ ಏಕ್ತಾ ಕಪೂರ್ ಹಾಡಿ ಹೊಗಳಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ವಿದ್ಯಾ ಅವರನ್ನು ವಿದ್ಯಾ ಬಾಲನ್ ಖಾನ್ ಎಂದು ಕರೆಯುವ ಮೂಲಕ ಬಾಲಿವುಡ್ 'ಖಾನ್‌'ಗಳಿಗೆ ಹೋಲಿಸಿದರು. ಇಡೀ ಚಿತ್ರದ ಯಶಸ್ಸು ವಿದ್ಯಾ ಬಾಲನ್‌ಗೆ ಸಲ್ಲುತ್ತದೆ ಎಂದಿದ್ದಾರೆ.

  ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾ, ಖಾನ್‌ಗಳೆಲ್ಲಾ ಇನ್ನು ಮುಂದೆ ತಮ್ಮ ಹೆಸರಿನೊಂದಿಗೆ ಬಾಲನ್ ಎಂದು ಸೇರಿಸಿಕೊಳ್ಳಲಿ ಎಂದು ಗೇಲಿ ಮಾಡಿದರು. ಇದಕ್ಕೆ ಅಲ್ಲೇ ಇದ್ದ ಶಾರುಖ್ ಖಾನ್ ಮುಸಿ ಮುಸಿ ನಗುತ್ತಾ, ಒಂದು ವೇಳೆ ವಿದ್ಯಾ ಬಾಲನ್ ತಮ್ಮನ್ನು ಮದುವೆಯಾದರೆ ಅವರು ತಮ್ಮ ಹೆಸರಿನೊಂದಿಗೆ 'ಖಾನ್' ಸೇರಿಸಿಕೊಳ್ಳಲು ತಮ್ಮದೇನು ಅಭ್ಯಂತರವಿಲ್ಲ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.

  ಶಾರುಖ್ ಹೀಗೆನ್ನುತ್ತಿದ್ದಂತೆ ವೇದಿಕೆಯಲ್ಲಿದ್ದ ಪತ್ರಕರ್ತರು ಕಕ್ಕಾಬಿಕ್ಕಿಯಾದರು. ಬಳಿಕ ಎಚ್ಚೆತ್ತುಕೊಂಡ ಶಾರುಖ್, ವಿದ್ಯಾ ಬಾಲನ್ ಸ್ವಂತ ಪ್ರತಿಭೆಯುಳ್ಳ ನಟಿ. ಆಕೆ ಯಾರ ಹೆಸರನ್ನೂ ತಮ್ಮ ಜೊತೆ ಸೇರಿಸಿಕೊಳ್ಳಬೇಕಾಗಿಲ್ಲ. ಅವರ ಹೆಸರಿನೊಂದಿಗೆ 'ಖಾನ್' ಸರ್‌ನೇಮ್ ಬೇಕಾಗಿಲ್ಲ ಎಂದರು. (ಏಜೆನ್ಸೀಸ್)

  English summary
  Shahrukh Khan had recently expressed his desire to marry Vidya Balan and even add her surname 'Balan' after his name! Hey, wait! Before you let your imagination fly, here's the story....
  Monday, December 26, 2011, 11:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X