»   »  ನಟ, ನಿರ್ದೇಶಕ ಫಿರೋಜ್ ಖಾನ್ ನಿಧನ

ನಟ, ನಿರ್ದೇಶಕ ಫಿರೋಜ್ ಖಾನ್ ನಿಧನ

Subscribe to Filmibeat Kannada
Legendary actor-director Feroz Khan dead
ಬೆಂಗಳೂರು, ಏ. 27: ಹೆಸರಾಂತ ಹಿಂದಿ ನಟ ಮತ್ತು ನಿರ್ದೇಶಕ ಫಿರೋಜ್ ಖಾನ್ ಬೆಂಗಳೂರಿನಲ್ಲಿರುವ ತನ್ನ ಫಾರ್ಮ್ ಹೌಸ್ ನಲ್ಲಿ ನಿನ್ನೆ(ಏ.26)ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಅವರು ಕಳೆದ ಒಂದು ವರ್ಷಗಳಿಂದ ಕ್ಯಾನ್ಸರ್ ಸಂಬಂಧ ಕಾಯಿಲೆಯಿಂದ ಬಳುತ್ತಿದ್ದರು.

2007 ರಲ್ಲಿ ಅವರು ನಟಿಸಿದ್ದ 'ವೆಲ್ಕಮ್' ಚಿತ್ರ ಅವರ ಕೊನೆಯ ಚಿತ್ರವಾಗಿತ್ತು. ಅಲ್ಲಿಂದ ಬಣ್ಣದಲೋಕದಿಂದ ದೂರ ಸರಿದಿದ್ದರು. ಧರ್ಮಾತ್ಮ, ಕುರ್ಬಾನಿ, ಜಾನ್ಬಾಜ ಮುಂತಾದ ಯಶಸ್ವಿ ಚಿತ್ರದ ನಿರ್ದೇಶಕರಾಗಿದ್ದರು. ಅವರು ಮಗ ಬಾಲಿವುಡ್ ನಟ ಫರ್ದೀನ ಖಾನ್ ಮತ್ತು ಮಗಳು ಲೈಲಾ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದ ಫಿರೋಜ್ 1960 ರಲ್ಲಿ 'ದೀದಿ' ಎನ್ನುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ನಿರ್ದೇಶಿಸಿ ಮತ್ತು ನಿರ್ಮಿಸಿದ್ದ 'ಧರ್ಮಾತ್ಮ' ಚಿತ್ರ ಅಫಘಾನಿಸ್ತಾನದಲ್ಲಿ ಚಿತ್ರೀಕರಿಸಿದ ಮೊದಲ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.

(ಏಜೆನ್ಸೀಸ್)

ಇದನ್ನೂ ಓದಿ
ಪಂಜಾಬ್ 69ನಿಂದ ಜಿಯಾ ಖಾನ್ ಔಟ್!
ಸ್ಲಂಡಾಗ್ ಮಿಲಿಯನೇರ್ ಬಾಲನಟಿ ಮಾರಾಟಕ್ಕೆ?
ಡ್ಯಾನಿ ಬಾಯ್ಲ್ ನಿರ್ದೇಶನದಲ್ಲಿ ಐಶ್ವರ್ಯ ರೈ?
ವರಮಾನ ತೆರಿಗೆಯಲ್ಲಿ ಶಾರುಖ್ ಹಿಂದಿಕ್ಕಿದ ಅಕ್ಕಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada