For Quick Alerts
  ALLOW NOTIFICATIONS  
  For Daily Alerts

  ಭಾರತದಲ್ಲಿ ಕಾಣೆಯಾದ ನಟಿ ಲೈಲಾ ದುಬೈನಲ್ಲಿ ಪತ್ತೆ

  By Rajendra
  |

  ಕಳೆದ ವರ್ಷ ಭಾರತದಲ್ಲಿ ಕಾಣೆಯಾಗಿದ್ದ ನಟಿಯನ್ನು ಕಡೆಗೂ ಪತ್ತೆ ಹಚ್ಚುವಲ್ಲಿ ಭಯೋತ್ಪಾದ ನಿಗ್ರಹ ದಳ (ಎಟಿಎಸ್) ಯಶಸ್ವಿಯಾಗಿದೆ. ಪಾಕಿಸ್ತಾನದ ನಟಿ ಲೈಲಾ ಖಾನ್ ಕಳೆದ ವರ್ಷ ಭಾರತದಲ್ಲಿ ಕಾಣೆಯಾಗಿದ್ದರು. ಈಗವರು ದುಬೈನಲ್ಲಿ ಪತ್ತೆಯಾಗಿದ್ದಾರೆ.

  ಲೈಲಾ ಖಾನ್ ಅವರು ತಮ್ಮ ತಾಯಿ, ನಾಲ್ವರು ಸಹೋದರರು, ಸಹೋದರಿ, ಸ್ನೇಹಿತ ಅತೀಖ್ ಜೊತೆ ಲೈಲಾ ಖಾನ್ ಪ್ರಸ್ತುತ ದುಬೈನಲ್ಲಿ ವಾಸಿಸುತ್ತಿದ್ದಾರೆ ಎಂದು ಎಟಿಎಸ್ ತಂಡ ತಿಳಿಸಿದೆ. ಲೈಲಾ ಖಾನ್ ಬಾಲಿವುಡ್‌ನ 'ವಫಾ' (2008) ಎಂಬ ಚಿತ್ರದಲ್ಲಿ ರಾಜೇಶ್ ಖನ್ನಾ ಜೊತೆ ಅಭಿನಯಿಸಿದ್ದರು.

  ಇಗತ್ ಪುರಿಯಲ್ಲಿ ತನ್ನ ಬಂಗಲೆಗೆ ಕೆಲವರಿಂದ ಬೆಂಕಿ ಹಚ್ಚಿಸುವ ಮೂಲಕ ತಾನು ಸಾವನ್ನಪ್ಪಿದ್ದೇನೆ ಎಂದು ಜನರನ್ನು ನಂಬಿಸುವ ರೀತಿಯಲ್ಲಿ ಪರಾರಿಯಾಗಲು ಖಾನ್ ಯೋಜನೆ ಹಾಕಿದ್ದಳು. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಆಕೆಯ ಕಾರು ಪತ್ತೆಯಾಗಿತ್ತು. ಈ ಬಗ್ಗೆ ಎಟಿಎಸ್ ತನಿಖೆ ನಡೆಸಿದಾಗ, ಅತೀಖ್ ಜೊತೆ ಖಾನ್ ಮತ್ತು ಅವರ ಕುಟುಂಬ ದುಬೈಗೆ ಪರಾರಿಯಾಗಿವುದು ಬೆಳಕಿಗೆ ಬಂದಿದೆ. (ಏಜೆನ್ಸೀಸ್)

  English summary
  Pakistani actress Laila Khan who had disappeared mysteriously from India last year has been finally traced by a team of Anti Terrorism Squad (ATS). According to the ATS team, Laila Khan is presently living in Dubai with her mother, four siblings and another person called ‘Ateeq’ who has married Khan’s mother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X