For Quick Alerts
  ALLOW NOTIFICATIONS  
  For Daily Alerts

  ರು.25 ಲಕ್ಷ ವಜ್ರಾಭರಣ ಕಳೆದುಕೊಂಡ ಸೋನಾಕ್ಷಿ ಸಿನ್ಹಾ

  By Rajendra
  |

  'ದಬಾಂಗ್' ಬೆಡಗಿ ಸೋನಾಕ್ಷಿ ಸಿನ್ಹಾ ರು.25 ಲಕ್ಷ ಬೆಲಬಾಳುವ ವಜ್ರಾಭರಣವನ್ನು ಸೆಟ್ಸ್‌ನಲ್ಲಿ ಕಳೆದುಕೊಂಡಿದ್ದಾರೆ. "ದಯವಿಟ್ಟು ಯಾರಿಗಾದರೂ ಸಿಕ್ಕಿದರೆ ಹುಡುಕಿಕೊಡಿ" ಅಂಥ ಮಾತ್ರಅವರು ವಿನಂತಿಸಿಕೊಂಡಿಲ್ಲ. ಸದ್ಯಕ್ಕೆ ಅವರು ವಜ್ರದ ಆಭರಣದಆಸೆ ಬಿಟ್ಟಿದ್ದಾರೆ. 'ಜೋಕರ್' ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.

  ಮೈಮೆಲೆ ವಜ್ರದ ಆಭರಣ ಇಲ್ಲ ಎಂದು ಗೊತ್ತಾಗುತ್ತಿದ್ದಂತೆ, ಅಲ್ಲೆಲ್ಲಾ ಹುಡುಕಾಡಿದ್ದಾರೆ. ಬಳಿಕ ಮರೆತು ಪೆಟ್ಟಿಗೆಯಲ್ಲೇ ಇಟ್ಟಿದ್ದೇನೋ ಏನೋ ಎಂದು ಹೋಗಿ ಹುಡುಕಿದ್ದಾರೆ. ಆದರೆ ಅಲ್ಲೂ ಇರಲಿಲ್ಲ. ಮತ್ತೊಬ್ಬರಾಗಿದ್ದರೆ ಅತ್ತು ರಾದ್ಧಾಂತ ಮಾಡುತ್ತಿದ್ದರೋ ಏನೋ. ಆದರೆ ಸೋನಾಕ್ಷಿ ಮಾತ್ರ ತಡಮಾಡದೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

  ಚಿತ್ರದ ನಿರ್ದೇಶಕ ಶಿರೀಶ್ ಕುಂದರ್ ಅವರ ಹುಟ್ಟುಹಬ್ಬವನ್ನು ಚಿತ್ರತಂಡ ಆಚರಿಸಿಕೊಂಡು ಸಂಭ್ರಮಿಸಬೇಕಾದರೆ ಈ ಘಟನೆ ನಡೆದಿದೆ. ಈ ಘಟನೆಯಿಂದ ಚಿತ್ರತಂಡ ಕೂಡ ಕಿರಿಕಿರಿ ಅನುಭವಿಸುವಂತಾಯಿತು ಎಂದಿದ್ದಾರೆ ಚಿತ್ರದ ನಿರ್ದೇಶಕರು. ಈ ಸಂಬಂಧ ಸೋನಾಕ್ಷಿ ಪೊಲೀಸರಿಗೂ ದೂರು ನೀಡಿದ್ದಾರೆ. (ಏಜೆನ್ಸೀಸ್)

  English summary
  Bollywood actress Sonakshi Sinha has lost diamond jewellery worth Rs 25 lakh on the sets of movie 'Joker'. The incident took place when the cast and the crew were enjoying Shirish Kunder’s birthday. However, the actress lodged a police complaint.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X