»   » ಮಣಿಗೆ ನೋ ಎಂದ ಸೋನಂ ಎಂಬ ಬಾಲೆ

ಮಣಿಗೆ ನೋ ಎಂದ ಸೋನಂ ಎಂಬ ಬಾಲೆ

Posted By:
Subscribe to Filmibeat Kannada

ಇನ್ನು ನೆಟ್ಟಗೆ ಎರಡು ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಅಬ್ಬಾ ಅಕೆಯ ಜಂಭವೇ ಎಂದು ಬಾಲಿವುಡ್ಗೆ ಬಾಲಿವುಡ್ಡೇ ಮಾತಾಡಿಕೊಳ್ಳುತ್ತಿದೆ. ಭಾರತದ ಅತ್ಯಂತ ಪ್ರತಿಭಾವಂತ ನಿರ್ದೇಶಕರ ಸಾಲಿನಲ್ಲಿ ಅಗ್ರಗಣ್ಯರೆನಿಸಿರುವ ಮಣಿರತ್ನಂ ಅವರ ಚಿತ್ರಕ್ಕೆ ನೋ ಎನ್ನುವ ಧೈರ್ಯ ಮಾಡಿರುವ ಹುಡುಗಿ ಅನಿಲ್ ಕಪೂರ್ ಅವರ ಮುದ್ದಿನ ಮಗಳು ಸೋನಮ್.

ಮಣಿರತ್ನಂ ಅವರ ಒಂದು ಕಾಲದ ಸಹಾಯಕ ನಿರ್ದೇಶಕ ಶಿವ ಅವರು ಮಣಿರತ್ನಂ ಅವರು ಬರೆದ ಚಿತ್ರಕಥೆ ಹಿಡಿದುಕೊಂದು ಸೋನಮ್ ಮೇಡಂ ಬಳಿ ಹೋಗಿ ಪಾತ್ರ ಮಾಡ್ತೀರಾ ಅಂದ್ರೆ. ತಡೀರಿ ಒಂದ್ನಿಮಿಷ ಅಂದು, ಪುಟ ತಿರುವಿ ಕಥೆ ಓದಿ, ಈ ಪಾತ್ರ ನಂಗೆ ಒಪ್ಪಲ್ಲ. ನಾನು ಮಾಡೋಲ್ಲ ಅಂದು ಬಿಡೋದೆ. ನೈಜ ಘಟನೆಗಳನ್ನು ಆಧಾರಿಸಿ, ರಚಿಸಲಾದ ಕಥೆಗೆ ಸೋನಂ ಸರಿಯಾದ ನಾಯಕಿ ಎಂದು ಮಣಿ ಕೂಡಾ ಸಲಹೆ ನೀಡಿದ್ದರು.

ಆದರೆ, ಸೋನಂ ಅವರ ವಕ್ತಾರರು ಇಲ್ಲಾ ಮೇಡಂ ಗೆ ಪಾತ್ರ ಇಷ್ಟ ಆಗಿಲ್ಲ. ನೋ ನೋ ಎಂದಿದ್ದಾರೆ. ಮಣಿ ಅವರ ಯುವ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವಿವೇಕ್ ಒಬೆರಾಯ್ ಪಾಕಿ ಚಿತ್ರಕ್ಕೆ ಮರು ಮಾತನಾಡದೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಸೋನಂ ಹುಡುಗುತನದ ಬುದ್ಧಿಯೋ ಅಥವಾ ನಿಜಕ್ಕೂ ಪಾತ್ರದ ಬಗ್ಗೆ ಭಯವೋ ಗೊತ್ತಿಲ್ಲ.

ಬಹುಶಃ ಚಿತ್ರರಂಗಕ್ಕೆ ಕಾಲಿಡಲು ಹೆಣಗುತ್ತಿದ್ದ ಸೋನಂ ಅವರ ಅಪ್ಪ ಅನಿಲ್ ಕಪೂರ್ ಗೆ ಅಂದ ಕಾಲತ್ತಿಲೇ , ಕನ್ನಡದಲ್ಲಿ ಪಲ್ಲವಿ ಅನುಪಲ್ಲವಿ ಚಿತ್ರದ ಮೂಲಕ ನಟನೆಯ ಎಬಿಸಿಡಿ ಕಲಿಸಿಕೊಟ್ಟಿದ್ದು ಮಣಿರತ್ನಂ ಎಂಬ ಕಥೆ ಸಾವರಿಯಾ ಹುಡ್ಗಿ ಕಿವಿಗೆ ಇನ್ನೂ ಬಿದ್ದಿಲ್ಲ ಅನ್ಸುತ್ತೆ. ಸದ್ಯ ಸೋನಂ ಕರಣ್ ಜೋಹರ್ ನಿರ್ಮಾಣದ ಐ ಹೇಟ್ ಲವ್ ಸ್ಟೋರಿಸ್ ಚಿತ್ರದಲ್ಲಿ ಇಮ್ರಾನ್ ಖಾನ್ ಜೊತೆಗೆ ನಟಿಸುತ್ತಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada