»   » ಲವ್ ಗುರು ಚಿತ್ರವನ್ನು ನಿಷೇಧಿಸಿ : ಮುತಾಲಿಕ್

ಲವ್ ಗುರು ಚಿತ್ರವನ್ನು ನಿಷೇಧಿಸಿ : ಮುತಾಲಿಕ್

Subscribe to Filmibeat Kannada

ಹುಬ್ಬಳ್ಳಿ, ಆ. 28 : ಭಾರತೀಯ ಸಂಸ್ಕೃತಿ ಹಾಗೂ ಹಿಂದು ಧರ್ಮವನ್ನು ಅವಹೇಳನ ಮಾಡಿ ಚಿತ್ರೀಕರಿಸಿರುವ 'ದಿ ಲವ್ ಗುರು' ಇಂಗ್ಲಿಷ್ ಚಿತ್ರವನ್ನು ಭಾರತದಲ್ಲಿ ಬಿಡುಗಡೆಗೊಳ್ಳಲು ಅವಕಾಶ ಮಾಡಿಕೊಡಬಾರದು ಎಂದು ಶ್ರೀರಾಮಸೇನೆ ಹಾಗೂ ಸನಾತನ ಸಂಸ್ಥೆಯ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ಹಾಗೂ ಸನಾತನ ಸಂಸ್ಥೆಯ ಮುಖ್ಯಸ್ಥ ಅರವಿಂದ ಕಾಮತ್ ಗುರುವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯಾಗುವುದನ್ನು ವಿರೋಧಿಸಲಾಗುವುದು ಎಂದರು. ಹಿಂದು ಧರ್ಮವನ್ನು ಅಪಹಾಸ್ಯ ಮಾಡಿ ಕೇಕೆ ಹಾಕಿ ನಗುವ ಕಿಡಿಗೇಡಿಗಳ ಚಿತ್ರ ಬಿಡುಗಡೆಗೆ ಭಾರತ ಸರ್ಕಾರ ಅನುಮತಿ ನೀಡಬಾರದು ಎಂದು ಅವರು ಆಗ್ರಹಿಸಿದರು. ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತೀವ್ರ ವಿರೋಧವಿರುವ ಮೈಕ್ ಮೈಯಾರ್ ಹಾಗೂ ಜೆಸ್ಸಿಕಾ ಅಲ್ಬಾ ಅಭಿನಯದ 'ದಿ ಲವ್ ಗುರು' ಚಿತ್ರವನ್ನು ರಾಜ್ಯದ ಯಾವ ಚಿತ್ರಮಂದಿರಗಳೂ ಪ್ರದರ್ಶನಕ್ಕೆ ಮುಂದಾಗಬಾರದು. ಚಿತ್ರ ಮಂದಿರಗಳ ಮಾಲೀಕರು ಚಿತ್ರದ ಖರೀದಿಗೆ ಮುಂದಾದಲ್ಲಿ ಅವರ ವಿರುದ್ಧ  ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಲವ್ ಗುರು ಚಿತ್ರದ ಆಡಿಯೋ ಕ್ಯಾಸೆಟ್ ಗಳನ್ನು ಮಾರಾಟ ಮಾಡಬಾರದು ಎಂದು ಅಡಿಯೋ ಕ್ಯಾಸೆಟ್ ಅಂಗಡಿಯ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada