ನಟಿ ನಯನತಾರಾಗೆ ರಾಮ್ ಗೋಪಾಲ್ ವರ್ಮಾ ಕರೆ

ವರ್ಮಾರ ರಾಮಾಯಣ ಚಿತ್ರದಲ್ಲಿ ಈಕೆಗೆ ಮಂಡೋದರಿ ಪಾತ್ರ ನೀಡಲಾಗುವುದಂತೆ. ಬೇರೆ ಯಾರಾದರೂ ಆಗಿದ್ದರೆ ತಕ್ಷಣ ಒಪ್ಪಿಕೊಳ್ಳುವಂತ ಕೊಡುಗೆ ಇದು. ಆದರೆ ಸುದ್ದಿ ಮೂಲದ ಪ್ರಕಾರ ನಯನತಾರಾ ಒಪ್ಪುವುದು ಕಷ್ಟ. ಕಾರಣ ಆಕೆ ಮದುವೆಯ ವಿಷಯದಲ್ಲಿ ಈಗ ಬಹಳ ಬ್ಯುಸಿ.
ಶ್ರೀ ರಾಮ ರಾಜ್ಯಂ ಚಿತ್ರ ವೀಕ್ಷಿಸಿದ ರಾಮ್ ಗೋಪಾಲ್ ವರ್ಮಾ ನಯನತಾರಾ ಅಭಿನಯ ನೋಡಿ ಸಖತ್ ಖುಷಿಯಾಗಿದ್ದಾರೆ. "ಈ ಚಿತ್ರ ಹಳೆಯ ಗ್ರಂಥವನ್ನು ಆಧರಿಸಿದ್ದರೂ ಹೊಸ ಪ್ರಯೋಗಕ್ಕೆ ಒಡ್ಡಿಕೊಳ್ಳಲಿದೆ" ಎಂದಿದ್ದಾರೆ. ಒಟ್ಟಿನಲ್ಲಿ ವರ್ಮಾ ಆಫರ್ ಒಪ್ಪಿಕೊಂಡರೆ ಮಂಡೋದರಿಯಾಗಿ ನಯನತಾರಾರನ್ನು ತೆರೆಯಲ್ಲಿ ನೋಡಿ ಆನಂದಿಸಬಹುದು. ಇಲ್ಲದಿದ್ದರೆ ಮಂಡೋದರಿ ಯಾರೋ..? (ಒನ್ ಇಂಡಿಯಾ ಕನ್ನಡ)
More from Filmibeat
English summary
Nayantara, who received rave reviews for her performance in Sri Rama Rajyam, has reportedly been offered yet another film, which has also links with epic Ramayana. Well, maverick filmmaker Ram Gopal Varma has approached her for his next movie.


Click it and Unblock the Notifications











