For Quick Alerts
  ALLOW NOTIFICATIONS  
  For Daily Alerts

  ಮುಂದೆಂದೂ ಲವ್ ಮಾಡಲಾರೆ ಎಂದ ಸಲ್ಮಾನ್ ಖಾನ್

  |

  ನಟ ಸಲ್ಮಾನ್ ಖಾನ್ ಪ್ರೇಮ ಹಾಗೂ ಡೇಟಿಂಗ್ ಬಗ್ಗೆ ಮೊದಲಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅವರಿನ್ನು ಪ್ರೀತಿಯಲ್ಲಿ ಬೀಳುವುದಿಲ್ಲವಂತೆ. ಸಲ್ಲೂ ಅಭಿಮಾನಿ ಹುಡುಗಿಯರಿಗೆ ಇದು ಶಾಕ್ ನ್ಯೂಸ್ ಆಗಿರಬಹುದು. ಆದರೆ ಸ್ವತಃ ಅವರೇ ಹೇಳಿರುವುದರಂದ ನಂಬಲೇಬೇಕು. ಸಲ್ಮಾನ್ ಈಗ ಡೇಟಿಂಗ್, ಪ್ರೀತಿ ಇವೆಲ್ಲವುಗಳಿಂದ ದೂರವಂತೆ.

  ಹಿಸ್ಟ್ರಿ ಚಾನಲ್ ಶೋ ಹಿಸ್ಟ್ರಿ ಹರ್ ದಿನ್ ಲಾಂಚ್ ಸಮಾರಂಭಕ್ಕೆ ಬಂದಿದ್ದ ಸಲ್ಮಾನ್ ಖಾನ್, ಈ 46ರ ವಯಸ್ಸಿನಲ್ಲೂ ಮಿರಮಿರ ಮಿಂಚುತ್ತಿದ್ದರು. ಈಗಲೂ ಸಲ್ಮಾನ್ ಕಂಡರೆ ಹುಡುಗಿಯರಿಗೆ ತುಂಬಾ ಕ್ರೇಜ್ ಇದೆಯಂತೆ, ಅವರ ಹಿಂದೆ ಬೀಳುತ್ತಾರಂತೆ. ಆದರೆ ಸಲ್ಲೂ, ಈಗ ಹುಡುಗಿಯರ ಹಿಂದೆ ಬೀಳುವ, ಅವರನ್ನು ಪಟಾಯಿಸುವ ಕಲೆ ಮರೆತಿದ್ದಾರಂತೆ.

  ಈ ಹಿಂದೆ ನಡೆದಿದೆ ಎನ್ನಲಾದ ಸಲ್ಲೂ ಪ್ರೇಮಕಥೆಗಳು ಒಂದೇ ಎರಡೇ? ಸೋಮಿ ಅಲಿ, ಐಶ್ವರ್ಯ ರೈ, ಹಾಗೂ ತೀರಾ ಇತ್ತೀಚಿಗೆ ಕತ್ರಿನಾ ಕೈಫ್. ಸಲ್ಲೂ ಅವರೆಲ್ಲರ ಜೊತೆ ಸ್ನೇಹ ಹೊಂದಿದ್ದ ಹಾಗೂ ಮದುವೆಯಾಗುತ್ತಾನೆ ಎಂದು ಸುದ್ದಿ ಕೂಡ ಹಬ್ಬಿತ್ತು. ಆದರೆ ಅದ್ಯಾವುದೂ ಸಾಧ್ಯವಾಗಲಿಲ್ಲ. ಆದರೆ ಇಂದಿಗೂ ಅವರು ಬಾಲಿವುಡ್ ನ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್. ಆದರೆ ಈಗ ಲವ್ ಮಾಡುವುದಿಲ್ಲ ಎಂದಿದ್ದಾರೆ, ಮುಂದೇನೋ ಯಾವೋನಿಗ್ಗೊತ್ತು? (ಏಜೆನ್ಸೀಸ್)

  English summary
  Salman Khan forgets the art of dating girls and decided not to fall in love again like his ex girlfriend Katrina Kaif.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X