For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಅಂಗಳಕ್ಕೆ ಸೋನಾಕ್ಷಿ ಸಿನ್ಹಾ ಸಹೋದರಿ

  By Rajendra
  |

  'ದಬಾಂಗ್' ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಜಿಗಿದ ಸೋನಾಕ್ಷಿ ಸಿನ್ಹಾ ಮೊದಲ ನೋಟದಲ್ಲೇ ಪ್ರೇಕ್ಷಕರ ಹೃದಯಕ್ಕೆ ನೇರವಾಗಿ ಡೈವ್ ಹೊಡೆದಿದ್ದರು. ಈಗಾಕೆ 'ರೌಡಿ ರಾಥೋಡ್' ಚಿತ್ರದಲ್ಲಿ "ಚಿಕ್ನಿ ಕಮರ್..." ಎಂದು ಕುಣಿದು ಪಡ್ಡೆಗಳ ನಿದ್ದೆಗೆಡಿಸಲು ಬರುತ್ತಿದ್ದಾರೆ. ಈ ಮೂಲಕ "ಚಿಕ್ನಿ ಚಮೇಲಿ" ಬೆಡಗಿ ಕತ್ರಿನಾ ಕೈಫ್‌ಗೂ ನಿದ್ದೆಯಿಲ್ಲದಂತೆ ಮಾಡಿದ್ದಾರೆ.

  ವಿಷಯ ಅದಲ್ಲ ಬಿಡಿ ಈಕೆಯ ಸಹೋದರಿ ಭಾವನಾ ರೂಪಾರೆಲ್ ಬಾಲಿವುಡ್‌ ಅಂಗಳಕ್ಕೆ ಜಿಗಿದಿದ್ದಾರೆ. ಅಲ್ಲಿಗೆ ನಟ ಕಮ್ ರಾಜಕಾರಣಿ ಶತ್ರುಘ್ನ ಸಿನ್ಹಾ ಖಾಂದಾನ್‌ನ ಮತ್ತೊಂದು ಕುಡಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದಂತಾಗಿದೆ. ಅಂದಹಾಗೆ ಈಕೆ ಅಭಿನಯಿಸುತ್ತಿರುವ ಚಿತ್ರಕ್ಕೆ 'ಚಲೋ ಪಿಕ್ಚರ್ ಬನಾತೆ ಹೈ' ಎಂದು ಹೆಸರಿಡಲಾಗಿದೆ.

  ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಹೊಸಬ ಪ್ರೀತಿಶ್ ಚಕ್ರವರ್ತಿ. ಭಾವನಾ ಅಭಿನಯಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ನಾ ತುಮ್ ಜಾನೋ ನಾ ಹಮ್ ಹಾಗೂ ಜಾಗರ್ಸ್ ಪಾರ್ಕ್ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದರು. ಈಗ ಪೂರ್ಣ ಪ್ರಮಾಣದ ನಾಯಕಿಯಾಗಿ ಭಾವನಾ ಆಯ್ಕೆಯಾಗಿದ್ದಾರೆ. (ಏಜೆನ್ಸೀಸ್)

  English summary
  Actress Sonakshi Sinha's cousin Bhavna Ruparel will soon make her Bollywood debut with the movie Chalo Pichchur Banate Hai. Debutant director Pritish Chakraborty will be casting Bhavna in this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X