For Quick Alerts
  ALLOW NOTIFICATIONS  
  For Daily Alerts

  ಮಿ. ಪರ್ಫೆಕ್ಟ್ ಅಮೀರ್ ಖಾನ್ ಗೇ ಸಾಜಿದ್ ಚಾಲೆಂಜ್

  |

  ಬಾಲಿವುಡ್ ನಲ್ಲಿ ಮಿಸ್ಟರ್ ಫರ್ಪೆಕ್ಟ್ ಎಂದೇ ಕರೆಸಿಕೊಳ್ಳುವವರು ಅಮೀರ್ ಖಾನ್. ಅವರಿಗೇ ಚಾಲೆಂಜ್ ನೀಡಿದ್ದಾರೆ, ನಿರ್ದೇಶಕ ಸಾಜಿದ್ ಖಾನ್. ಅವರ 'ಹೌಸ್ ಫುಲ್ 2' ಚಿತ್ರ ಅಮೀರ್ ಖಾನ್ ರ ಘಜನಿಯನ್ನು ಬೀಟ್ ಮಾಡಲಿದೆಯಂತೆ. ಹೀಗೆಂದು ಹೇಳಿರುವ ಸಾಜಿದ್ ಹೇಳಿಕೆ ಈಗ ಬಾಲಿವುಡ್ ನಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

  ಘಜನಿಯಲ್ಲಿ ನಟಿಸಿದ್ದ ನಟಿ ಆಸಿನ್ ಅವರಿಗೊಂದು ಪತ್ರ ಬರೆದಿರುವ ಸಾಜಿದ್, ಅದರಲ್ಲಿ 'ನಮ್ಮ ವೃತ್ತಿಜೀವನದ ಅತಿದೊಡ್ಡ ಹಿಟ್ ಆಚರಿಸಲು ರೆಡಿಯಾಗಿ' ಎಂಬ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲದೇ, ಹೌಸ್ ಫುಲ್ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆಯಲಿದೆ ಎಂದಿದ್ದಾರೆ. ಅಮೀರ್ ಘಜನಿ ದಾಖಲೆ ಧೂಳೀಪಟವಾಗಲಿದೆ ಎಂದಿದ್ದಾನೆ ಸಾಜಿದ್.

  ಸಾಜಿದ್ ಹೇಳುವಂತೆ, 'ಹೌಸ್ ಫುಲ್ 2' ಚಿತ್ರವನ್ನು ಪ್ರತಿಯೊಬ್ಬರೂ ಮೂರರಿಂದ ನಾಲ್ಕು ಬಾರಿ ನೋಡುವಂತಿದೆ. ಅಷ್ಟು ಚೆನ್ನಾಗಿ ಮೂಡಿಬಂದಿರುವ ಈ ಚಿತ್ರ, ಬಾಲಿವುಡ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ' ಎಂದಿದ್ದಾರೆ. ನಟ ಅಕ್ಷಯ್ ಕುಮಾರ್ ಕೂಡ ಈ ಮಾತಿಗೆ ದನಿಗೂಡಿಸಿದ್ದು, ಬಾಲಿವುಡ್ ನಲ್ಲಿ ಹೊಸ ನಿರೀಕ್ಷೆಗೆ ಕಾರಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಚಾಲೆಂಜ್ ಗೆ ಅಮೀರ್ ಖಾನ್ ಹೇಗೆ ಪ್ರತಿಕ್ರಿಯೆ ನೀಡಬಹುದೆಂಬುದು ಈಗ ಎಲ್ಲರೂ ಕುತೂಹಲದ ಕೇಂದ್ರಬಿಂದು. (ಏಜೆನ್ಸೀಸ್)

  English summary
  Sajid Khan challenges Aamir Khan and is confident that Housefull 2 will beat Ghajini's box office collections.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X