For Quick Alerts
  ALLOW NOTIFICATIONS  
  For Daily Alerts

  ಒಂದೂವರೆ ಕೋಟಿಗೆ ಮಲ್ಲಿಕಾ ಶೆರಾವತ್ ಡಿಮ್ಯಾಂಡ್

  By Rajendra
  |

  ಬಾಲಿವುಡ್‌ನ ಬಂಗಾರದ ಜಿಂಕೆ ಮಲ್ಲಿಕಾ ಶೆರಾವತ್‌ಗೆ ಅವಕಾಶಗಳು ಈಗ ಅಷ್ಟಷ್ಟು ಮಾತ್ರವೆ. ವಿಷಯ ಹೀಗಿದ್ದರೂ ಐಟಂ ಹಾಡಿಗಳಿಗೆ ಮಾತ್ರ ಭರ್ಜರಿ ಬೇಡಿಕೆ ಬರುತ್ತಿದೆ. ಆದರೆ ಮಲ್ಲಿಕಾ ರೇಟು ಕೇಳಿ ನಿರ್ಮಾಕರು ಮೂರ್ಛೆ ಬೀಳುತ್ತಿದ್ದಾರೆ.

  ಇತ್ತೀಚೆಗೆ 'ಮ್ಯಾಗ್ಜಿಮಮ್' ಚಿತ್ರಕ್ಕಾಗಿ ನಿರ್ಮಾಪಕರು ಆಕೆಯನ್ನು ಸಂಪರ್ಕಿಸಿದರೆ, ಒಂದೂವರೆ ಕೋಟಿ ಕೊಡವಂತಿದ್ದರೆ ಮುಂದೆ ಮಾತನಾಡಿ ಎಂದರಂತೆ. ಎಲ್ಲೋ ಕಾಲಿಟ್ಟಂತಾದ ನಿರ್ಮಾಪಕರಿಗೆ ಹಾವು ತುಳಿದಂತಾಗಿ ಅಲ್ಲಿಂದ ಛಂಗನೆ ಎಗರಿಕೊಂಡರಂತೆ.

  ಕಳೆದ ವರ್ಷ ಮೂರು ಹಾಡುಗಳಲ್ಲಿ ಮಲ್ಲಿಕಾ ಮೈ ಬಳುಕಿಸಿದ್ದರು. ಒಂದು ಹಾಡಿಗೆ ರು.6೦ ಲಕ್ಷ, ಇನ್ನೆರಡು ಹಾಡುಗಳಿಗೆ ತಲಾ ರು. 80 ಲಕ್ಷ ಎಣಿಸಿದ್ದಾರೆ. ಇತ್ತೀಚೆಗೆ 'ತೇಝ್' ಎಂಬ ಚಿತ್ರದ ಹಾಡೊಂದರಲ್ಲಿ ಮೈಮಾಟ ತೋರಿರುವ ಮಲ್ಲಿಕಾಗೆ ಚಿತ್ರದ ನಿರ್ಮಾಪಕ ರತನ್ ಜೈನ್ ಒಂದೂಕಾಲು ಕೋಟಿ ಕೊಟ್ಟಿದ್ದಾರಂತೆ.

  ಅವರು ಹಾಗೆ ಕೊಟ್ಟಿದ್ದೇ ತಡ, ಮಲ್ಲಿಕಾ ದಿಢೀರ್ ಎಂದು ತಮ್ಮ ಸಂಭಾವನೆಯನ್ನು ಒಂದೂವರೆ ಕೋಟಿಗೆ ಏರಿಸಿಕೊಂಡಿದ್ದಾರೆ. ಮಲ್ಲಿಕಾ ಹೀಗೆ ಏಕಾಏಕಿ ರೇಟು ಏರಿಸಿದರೆ ಕಡೆಗೆ ಐಟಂ ಹಾಡುಗಳು ಸಿಗುವುದು ಕಷ್ಟ ಎನ್ನುತ್ತವೆ ಬಾಲಿವುಡ್ ಮೂಲಗಳು. ಆದರೆ ಮಲ್ಲಿಕಾ ಮಾತ್ರ ಒಂದೂವರೆ ಕೋಟಿಯಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ. (ಏಜೆನ್ಸೀಸ್)

  English summary
  Bollywood has gone gaga for item girls and their sexy songs. Now actress Mallika Sherawat is demanding one to inflate her popularity. Rumours say that ultimately the producers couldn't afford her remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X