ಅಮೀರ್ ಖಾನ್ ಏಡ್ಸ್ ಕುರಿತ ಚಿತ್ರದಲ್ಲಿ ನಟಿಸುವರೇ?
ಬಾಲಿವುಡ್ ನಿರ್ದೆಶಕ ಪ್ರಿಯದರ್ಶನ್, ಅಮೀರ್ ಖಾನ್ ನಟನೆಯ ಏಡ್ಸ್ ಕುರಿತ ಚಿತ್ರವನ್ನು ತಯಾರಿಸಲಿದ್ದಾರೆ. ಈ ಚಿತ್ರ ಮಾಡುವ ಬಗ್ಗೆ ಅವರು 2009ರಲ್ಲಿಯೇ ನಿರ್ಧರಿಸಿ ಅಮೀರ್ ಜೊತೆ ಮಾತುಕತೆ ಕೂಡ ನಡೆಸಿದ್ದರು. ಆದರೆ ಕಾರಣಾಂತರಗಳಿಂದ ಅದರ ನಿರ್ಮಾಣ ಆಗಿರಲಿಲ್ಲ. ಸದ್ಯ ಅವರು ಚಿತ್ರೀಕರಿಸುತ್ತಿರುವ 'ಕಮಾಲ್ ಧಮಾಲ್ ಮಾಲಾಮಾಲ್' ಚಿತ್ರದ ನಂತರ ಈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.
"ಬಾಲಿವುಡ್ ಮಿ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತರಾಗಿರುವ ಅಮೀರ್ ಜೊತೆ ಕೆಲಸ ಮಾಡುವುದು ನನಗಿಷ್ಟ. ಹಾಗಾಗಿ ನಾನು ಅವರನ್ನೇ ಇನ್ನೂ ಮನಸ್ಸಿನಲ್ಲಿಟ್ಟು ಸ್ಕ್ರಿಪ್ಟ್ ಮಾಡುತ್ತಿದ್ದೇನೆ. ಅವರು ಈ ಮೊದಲು ನಟಿಸಲು ಒಪ್ಪಿದ್ದರು. ಈಗ ಸಾಕಷ್ಟು ಬಿಜಿಯಿದ್ದರೂ ನನ್ನ ಚಿತ್ರವನ್ನು ಖಂಡಿತ ಒಪ್ಪಿಕೊಳ್ಳುತ್ತಾರೆಂಬ ಭರವಸೆಯಿದೆ" ಎಂದಿದ್ದಾರೆ.
ಸತ್ಯಮೇವ ಜಯತೇ ಮೂಲಕ ಈಗಾಗಲೇ ಕಿರುತೆರೆ ಪ್ರವೇಶಕ್ಕೂ ಸಜ್ಜಾಗಿರುವ ಅಮೀರ್, ಈ ಚಿತ್ರವನ್ನು ಮೊದಲಿನ ಕಮಿಟ್ ಮೆಂಟ್ ಎಂದು ಪರಿಗಣಿಸಿ ನಟಿಸುತ್ತಾರೋ ಅಥವಾ ಇಲ್ಲವೋ ಎಂಬುದು ಇನ್ನಷ್ಟೇ ನಿರ್ಧಾರವಾಗಲಿದೆ. ಆದರೆ ನಿರ್ದೇಶಕ ಪ್ರಿಯದರ್ಶನ್ ಮಾತ್ರ ಅಮೀರ್ ಬಗ್ಗೆ ಭರವಸೆಯಿಟ್ಟು ಪ್ರಯತ್ನ ಮುಂದುವರಿಸಿದ್ದಾರೆ. ಕಾದು ನೋಡೋಣ... (ಏಜೆನ್ಸೀಸ್)


Click it and Unblock the Notifications











