»   » ಐಶ್ವರ್ಯ ರೈ 'ಬೇಟಿ ಬಿ' ಫೋಟೋ ಮಾರಾಟ?

ಐಶ್ವರ್ಯ ರೈ 'ಬೇಟಿ ಬಿ' ಫೋಟೋ ಮಾರಾಟ?

Posted By:
Subscribe to Filmibeat Kannada
Aishwarya Rai
ಬಚ್ಚನ್ ಪರಿವಾರದ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ಮಗಳು ಈಗ ದೇಶ ಹಾಗು ವಿದೇಶಗಳಲ್ಲಿ ಸುದ್ದಿಯ ಕೇಂದ್ರಬಿಂದು. ಈ 'ಬೇಟಿ ಬಿ' ಫೊಟೋಕ್ಕಾಗಿ ವಿಶ್ವದಾದ್ಯಂತ ಚರ್ಚೆ, ಸ್ಪರ್ಧೆ ನಡೆಯುತ್ತಿದೆ. ಆಶ್ಚರ್ಯವೆಂದರೆ ಐಶೂ ಮಗಳ ಫೋಟೋಕ್ಕಾಗಿ ಅಮೆರಿಕಾದ ಸಾಕಷ್ಟು ಪತ್ರಿಕೆಗಳು ಕಾಯುತ್ತಿವೆ, ಬೇಡಿಕೆ ಸಲ್ಲಿಸುತ್ತಿವೆ.

ಇನ್ನು ಭಾರತದಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಈ ಮಗುವಿನ ಫೋಟೋ ವನ್ನು ತಾವು ಹೇಳುವವರೆಗೆಯಾರೂ ಕ್ಲಿಕ್ ಮಾಡಬೇಡಿ ಹಾಗೂ ಪ್ರಕಟಿಸಬೇಡಿ ಎಂದು ಅವರಜ್ಜ ಅಮಿತಾಬ್ ಕಟ್ಟಪ್ಪಣೆ ಹೊರಡಿಸಿದ್ದಾರೆ. ಹಾಗಾಗಿ ಈಗ ಮಗುವಿನ ಫೋಟೋ ಯಾರು ಬಹಿರಂಗ ಪಡಿಸುತ್ತಾರೆ ಎಂಬ ಕುತೂಹಲ ಇಡೀ ದೇಶದಲ್ಲಿ ಹಬ್ಬಿದೆ.

ನ್ಯಾಷನಲ್ ಹಾಗೂ ಗ್ಲೋಬಲ್ ಮೀಡಿಯಾ ಕೂಡ ಪ್ರಯತ್ನಿಸುತ್ತಿದ್ದರೂ ಇನ್ನೂ ಒಂದೇ ಒಂದು ಫೋಟೋ ಪಡೆಯಲು ಸಾಧ್ಯವಾಗಿಲ್ಲ, ಭಲೇ 'ಬೇಟಿ ಬಿ'..! ಈ ಮಧ್ಯೆ ಮಗುವಿನ ಫೋಟೋಕ್ಕೆ ಅಮಿತಾಬ್ ಕೋಟಿಗಟ್ಟಲೇ ಹಣ ಕೇಳುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅದು ಅಭಿ-ಐಶೂ ಮದುವೆಯಾದ ತಕ್ಷಣವೂ ಹಬ್ಬಿತ್ತು.

ಅವೆಲ್ಲಾ ಆಗ ಸುಳ್ಳೆಂದು ಸಾಬೀತಾಗಿತ್ತು. ಈಗ ಮತ್ತೆ ಮಗುವಿನ ಫೋಟೋ ವಿಷಯದಲ್ಲಿ ಅಮಿತಾಬ್ ಅವನ್ನು ಕೋಟಿಗಟ್ಟಲೇ ಹಣಕ್ಕಾಗಿ ಮಾರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಬಚ್ಚನ್ ಪರಿವಾರದಿಂದ ಬರುವ ಸ್ಷಷ್ಟೀಕರಣಕ್ಕಾಗಿ ಕಾಯಲೇಬೇಕು. (ಏಜೆನ್ಸೀಸ್)

English summary
Foreign media have offered a lump sum amount of money to the Bachchans to get Aishwarya Rai baby girl photos.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada