For Quick Alerts
  ALLOW NOTIFICATIONS  
  For Daily Alerts

  ಚಿರಯೌವನೆ ರೇಖಾ ಜೊತೆ ಅಮಿತಾಬ್ ಸಿಲ್ ಸಿಲಾ

  |

  ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಮೇರುನಟ ಅಮಿತಾಬ್ ಬಚ್ಚನ್, ಸಿನಿಪ್ರೇಕ್ಷಕರ ತೀವ್ರ ಕುತೂಹಲಕಾರಿಯಾದ ವಿಷಯವೊಂದಕ್ಕೆ ಉತ್ತರ ನೀಡಿದ್ದಾರೆ. ಅದು ಒಂದು ಕಾಲದ ಸುಂದರಿ, ಚಿರಯೌವನೆ ನಟಿ ರೇಖಾ ಜೊತೆ ಮತ್ತೆ ನಟಿಸುವ ವಿಷಯ. "ನನಗೆ ಚಿತ್ರದ ಕಥೆ ಇಷ್ಟವಾದರೆ ಮತ್ತೆ ರೇಖಾ ಜೊತೆ ನಟಿಸಲು ನಾನು ಸಿದ್ಧ" ಎಂದಿದ್ದಾರೆ ಬಿಗ್ ಬಿ.

  ಹಿಂದೊಮ್ಮೆ ಅಮಿತಾಬ್-ರೇಖಾ ಬಾಲಿವುಡ್ ಜೋಡಿ ಇಡೀ ಭಾರತದ ಸಿನಿಪ್ರೇಕ್ಷಕರಿಗೆ ಮೆಚ್ಚುಗೆಯಾಗಿದ್ದಲ್ಲದೇ ಹುಚ್ಚು ಹಿಡಿಸಿತ್ತು. ತೆರೆಯ ಮೇಲೆ ಅವರಿಬ್ಬರ ಕೆಮೆಸ್ಟ್ರಿ ಅದೆಷ್ಟು ಚೆನ್ನಾಗಿತ್ತೆಂದರೆ ಅವರಿಬ್ಬರು ನಿಜ ಜೀವನದಲ್ಲಿಯೂ ಜೋಡಿಯೇ ಅನ್ನುವಷ್ಟು. ನಂತರ, ಅವರಿಬ್ಬರ ಜೋಡಿಯ ಚಿತ್ರಗಳು ಬರುವುದು ಕಡಿಮೆಯಾಗಿ ಕೆಲಕಾಲದ ನಂತರ ಸಂಪೂರ್ಣ ನಿಂತೇ ಹೋಗಿತ್ತು. ಅವರಿಬ್ಬರ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿತ್ತು.

  ಅವರಿಬ್ಬರು ಜೊತೆಯಾಗಿ ನಟಿಸಿದ ಕೊನೆಯ ಚಿತ್ರ 1981ರಲ್ಲಿ ಬಂದ 'ಸಿಲ್ಸಿಲಾ'. ನಂತರ ಪ್ರೇಕ್ಷಕರು ಕಾದಿದ್ದೇ ಬಂತು, ಅವರಿಬ್ಬರೂ ಒಟ್ಟಾಗಿ ನಟಿಸಲಿಲ್ಲ. ಆದರೆ ಈಗ ಅಮಿತಾಬ್ ಮಾತಿನಿಂದ ಮತ್ತೆ ಆಶಾಭಾವ ಮೂಡುವಂತಾಗಿದೆ. ಅಮಿತಾಬ್ ಅವರಿಗೆ ಇಷ್ಟವಾಗಬಹುದಾದ ಕಥೆ ಮಾಡಿ ಯಾರು ಅವರನ್ನು ಒಪ್ಪಿಸಿ ಮತ್ತೆ ರೇಖಾ ಜೊತೆ ತೆರೆ ಹಂಚಿಕೊಳ್ಳುವಂತೆ ಮಾಡಬಹುದೆಂದು ಎಲ್ಲರೂ ಕಾಯುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  During a recent press meet, Amitabh Bachchan said that he would not mind working with veteran actress Rekha if the script interests him.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X