For Quick Alerts
  ALLOW NOTIFICATIONS  
  For Daily Alerts

  ರಾಜ್ ಅಭಿಮಾನಿಯಾಗಿದ್ದ ಫಿರೋಜ್ ಖಾನ್

  By Super
  |

  ಹೆಸರಾಂತ ಹಿಂದಿ ನಟ ಮತ್ತು ನಿರ್ದೇಶಕ ಫಿರೋಜ್ ಖಾನ್ ಬೆಂಗಳೂರಿನಲ್ಲಿರುವ ತನ್ನ ಫಾರ್ಮ್ ಹೌಸ್ ನಲ್ಲಿ ಏ.26 ರಂದು ನಿಧರಾಗಿದ್ದು ಗೊತ್ತೇ ಇದೆ. ಬೆಂಗಳೂರು, ಕನ್ನಡ ಭಾಷೆಯ ಬಗ್ಗೆ ಅವರ ಸಂಬಂಧ ಹೇಗಿತ್ತು? ಈ ಪ್ರಶ್ನೆಗೆ ಫಿರೋಜ್ ಖಾನ್ ಅವರ ಬಾಲ್ಯದ ಗೆಳೆಯ ಮಂಜುನಾಥ್ ಹೆಗಡೆ ಕೊಟ್ಟ ಉತ್ತರ ನಿಜಕ್ಕೂ ಎಂತಹವರನ್ನೂ ಮೂಕ ವಿಸ್ಮಯವಾಗಿಸುತ್ತದೆ.

  ''ಕರ್ನಾಟಕವನ್ನು ಅವರು ಪ್ರೀತಿಸುತ್ತಿದ್ದರು. ಅಷ್ಟೇ ಅಲ್ಲ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದಖಾನ್ ನಾನು ಬೆಂಗಳೂರಿಗ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು'' ಎನ್ನುತ್ತಾರೆ ಮಂಜುನಾಥ . ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದ ಅವರು ಇಲ್ಲಿನ ಹವಾಮಾನಕ್ಕೆ ಮಾರುಹೋಗಿ ತಮ್ಮ ಕೊನೇ ದಿನಗಳನ್ನು ಬೆಂಗಳೂರಿನಲ್ಲೇ ಕಳೆದರು. ವರನಟ ಡಾ.ರಾಜ್ ಅವರ ಅಭಿಮಾನಿಯೂ ಆಗಿದ್ದರು ಎನ್ನುತ್ತಾರೆ ಮಂಜುನಾಥ್.

  ಫಿರೋಜ್ ಕೇವಲ ನಟ ಮಾತ್ರ ಆಗಿರಲಿಲ್ಲ ಅವರೊಬ್ಬ ಉತ್ತಮ ಕ್ರೀಡಾಪಟುವೂ ಆಗಿದ್ದರು. ಬಿಲಿಯರ್ಡ್ಸ್ ನಲ್ಲಿ ರಾಜ್ಯ ಮಟ್ಟದ ಚಾಂಪಿಯನ್ ಆಗಿದ್ದರು. ಮನೆಯಲ್ಲಿ ಹೆಚ್ಚಿನ ಸಮಯ ಬಿಲಿಯರ್ಡ್ಸ್ ಗಾಗಿ ಮೀಸಲಿಡುತ್ತಿದ್ದ ಫಿರೋಜ್ ಉತ್ತಮ ಬೋಜನ ಪ್ರಿಯರು ಆಗಿದ್ದರು. ತಾಜ್ ವೆಸ್ಟ್ ಎಂಡ್ ಹೋಟೆಲ್ ಅವರ ನೆಚ್ಚಿನ ತಾಣವಾಗಿತ್ತು. ಮುಖ್ಯವಾಗಿ ರೇಸ್ ಕೋರ್ಸ್ ನಲ್ಲಿ ಪಂದ್ಯಗಳು ನಡೆಯುವಾಗ ತಾಜ್ ಹೋಟೆಲ್ ನಲ್ಲೇ ಹೆಚ್ಚಾಗಿ ಅಲ್ಲೇ ಕಳೆಯುತ್ತಿದ್ದರು. ಒಂದು ಜೊತೆ ಕುದುರೆಗಳನ್ನು ಹೊಂದಿದ್ದ ಅವರು ಉತ್ತಮ ಆಟಗಾರರು ಆಗಿದ್ದರು ಎಂಬ ಆಸಕ್ತಿಕರ ಅಂಶಗಳನ್ನು ಮಂಜುನಾಥ್ ಹೊರಗೆಡುಹಿದ್ದಾರೆ.
  (ದಟ್ಸ್ ಕನ್ನಡ ಚಿತ್ರವಾರ್ತೆ)

  English summary
  Feroz Khan's childhood friend and Bangalorean Manjunath Hegde gives a glimpse of the star's association with Bengaluru,
  Wednesday, September 4, 2013, 14:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X